Ticker

6/recent/ticker-posts

Ad Code

ಕಾಳ್ಯಂಗಾಡು ಬ್ರಹ್ಮಕಲಶೋತ್ಸವ ಏಪ್ರಿಲ್ 26 ರಿಂದ ಮೇ 2 ರ ತನಕ : ವಿವಿಧ ಸಮಿತಿಗಳ ಪ್ರಮುಖರ ನೇತೃತ್ವದಲ್ಲಿ ಸಿದ್ದತಾ ಸಭೆ

 

ಕಾಸರಗೋಡು : ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಇದೇ ಬರುವ ಏಪ್ರಿಲ್ 26 ರಿಂದ ಮೇ 2 ರ ತನಕ ಜರಗಲಿರುವ  ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಿದ್ದತಾ ಸಭೆಯು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಕೆ.ಎನ್ ವೆಂಕಟರಮಣ ಹೊಳ್ಳ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಕ್ಷೇತ್ರದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಬ್ರಹ್ಮಕಲಶೋತ್ಸವದ ವಿವಿಧ ಉಪಸಮಿತಿಗಳ ಜವಾಬ್ದಾರಿ, ಆಮಂತ್ರಣ ಪತ್ರಿಕೆ ಸಮಿತಿಯಿಂದ ತಂಡಗಳನ್ನು ರಚಿಸಿ ವಿವಿಧೆಡೆಗೆ ಹಂಚುತ್ತಿರುವ ಬಗ್ಗೆ ಆರ್ಥಿಕ ವ್ಯವಸ್ಥೆ ಹಾಗೂ ಶ್ರಮದಾನದ ಮೂಲಕ ಪರಿಸರದ ಯುವಕರ ಜೊತೆ ಸೇರಿ ತಾವು ಕೆಲಸಕಾರ್ಯಗಳಲ್ಲಿ ಭಾಗಿಯಾದ ಕುರಿತು  ಹೊಳ್ಳರು  ಮಾತನಾಡಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಮೊಕ್ತೇಸರ  ಅಚ್ಚುತ ಕಾಳ್ಯಂಗಾಡು, ಧರ್ಮದರ್ಶಿ  ನಾರಾಯಣ, ಪುಷ್ಪಮ್ಮ ಕಾಳ್ಯಂಗಾಡು, ಮಧೂರು ಪಂಚಾಯತ್ ಕೌನ್ಸಿಲರ್ ಗಣೇಶ್ ಮೀಪುಗುರಿ, ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್ ರಾಜ್ ಕೊರಕೋಡ್, ಸಮಿತಿ ಸಲಹೆಗಾರ ರಘು ಮೀಪುಗುರಿ, ಆರ್ಥಿಕ ಸಮಿತಿ ಪ್ರಮುಖರಾದ ವೇಣು ವಿ, ಕಾರ್ಯದರ್ಶಿ ಗೋವಿಂದ, ಭಜನಾ  ಸಮಿತಿಯ ಗಣೇಶ್ ಕೇಳುಗುಡ್ಡೆ, ತಿರುಮಲೇಶ್ ಆಚಾರ್ಯ, ಕೆ ಜಗದೀಶ್  ಕೂಡ್ಲು, ರೋಹಿತ್ ಮಧೂರು, ಮಾಧ್ಯಮ ಸಮಿತಿಯ ಜಯ ಮಣಿಯಂಪಾರೆ, ಪುರುಷೋತ್ತಮ ಭಟ್, ವಸಂತ್ ಕೆರೆಮನೆ, ಮಹಿಳಾ ಸಂಘ ಕಾರ್ಯದರ್ಶಿಯಾಗಿ  ದೀಪಾ ಕಾಳ್ಯಂಗಾಡ್, ಕಾರ್ಯಾಲಯ ಸಮಿತಿಯ ಗಣೇಶ ಮನ್ನಿಪ್ಪಾಡಿ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ  ದಯಾನಂದ ಕೊಳ್ಕೆಬೈಲು ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಶಾಂತ ಕುಮಾರ್ ಮುಂಡಿತ್ತಡ್ಕ ಧನ್ಯವಾದ ನೀಡಿದರು. ಬ್ರಹ್ಮಕಲಶೋತ್ಸವದ ಕಾರ್ಯದರ್ಶಿ ರಂಜಿತ್ ಮನ್ನಿಪ್ಪಾಡಿ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.

Post a Comment

0 Comments