ಕಾಸರಗೋಡು : ತಾಯಿ, ಪತ್ನಿ ಮತ್ತು ಮಗ ನೇಮೋತ್ಸವಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯ ಯಜಮಾನ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾಗಿ ತಿಳಿದು ಬಂದಿದೆ. ಕಾಸರಗೋಡಿನ ಬೀರಂತಬೈಲಿನ ದಿ. ಬಾಬು ನಾಯಕ್ ಅವರ ಪುತ್ರ ಬಿ. ಪ್ರಕಾಶ್ (48) ಆತ್ಮಹತ್ಯೆ ಮಾಡಿಕೊಂಡವರು. ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ತಾಯಿ ಲೀಲಾವತಿ, ಪತ್ನಿ ಪ್ರಿಯಾ ಮತ್ತು ಏಕೈಕ ಪುತ್ರ ಧನ್ವಿತ್ ತಮ್ಮ ಮನೆಯ ಬಳಿ ನಡೆದ ನೇಮೋತ್ಸವಕ್ಕೆ ಹೋಗಿದ್ದರು.
ಅವರು ರಾತ್ರಿ ಹಿಂತಿರುಗಿದಾಗ, ಪ್ರಕಾಶ್ ಮನೆಯ ಹಿಂದಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರನ್ನು ತಕ್ಷಣ ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವ ಉಳಿಸಲಾಗಲಿಲ್ಲ. ಘಟನೆಯಲ್ಲಿ ಕಾಸರಗೋಡು ನಗರ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ್ದಾರೆ. ಮೃತರು ಸಹೋದರರಾದ ಚಂದ್ರಶೇಖರ, ಪುರುಷೋತ್ತಮ, ರಾಜೇಶ್, ವಿಶಾಲಾಕ್ಷಿ, ಪದ್ಮಾವತಿ, ಚಂದ್ರಾವತಿ ಮತ್ತು ಪ್ರಮೀಳಾ ಇವರನ್ನು ಆಗಲಿದ್ದಾರೆ.

0 Comments