ಮುಳ್ಳೇರಿಯ: ಬಾವಿಕ್ಕೆರೆಯ ಪಂಪ್ ಹೌಸ್ ಬಳಿಯ ಜಲ ಪ್ರಾಧಿಕಾರದ ಮೂರು ಹಳೆಯ ಕಟ್ಟಡಗಳು ಶಿಥಿಲಗೊಂಡು ಅಪಾಯಕಾರಿ ಸ್ಥಿತಿಯಲ್ಲಿವೆ. ಈ ಕಟ್ಟಡಗಳನ್ನು ಜಲ ಪ್ರಾಧಿಕಾರದ ನೌಕರರ ವಸತಿಗಾಗಿ ಹಲವು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಆದರೆ, ಇತ್ತೀಚೆಗೆ ಬೋವಿಕ್ಕಾನದಲ್ಲಿ ಹೊಸ ಕಟ್ಟಡ ನಿರ್ಮಿಸಿದಾಗ, ನೌಕರರು ಅಲ್ಲಿಗೆ ಸ್ಥಳಾಂತರಗೊಂಡಿದ್ದರು.
ಇದರಿಂದ ಈ ಕಟ್ಟಡಗಳು ಪಾಳುಬಿದ್ದವು. ಶೀಟ್ ಹೊದಿಸಿದ ಕಟ್ಟಡಗಳ ಛಾವಣಿ, ಗೋಡೆ, ಬಾಗಿಲು, ಕಿಟಕಿಗಳು ಹಾನಿಗೀಡಾಗಿದ್ದು, ಕಟ್ಟಡಗಳು ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿವೆ. ಹಳೆಯ ಕಟ್ಟಡವನ್ನು ಕೆಡವಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

0 Comments