ಪೆರ್ಲ : ಋಷಿ ಮುನಿಗಳ ಸಂಸ್ಕೃತಿ ನಮ್ಮದು. ನಮ್ಮ ದೇಶ ಹಾಗೂ ನಮ್ಮ ಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿದೆ. ನಮ್ಮಲ್ಲಿ ನಾವು ಭಾರತೀಯತೆಯನ್ನು ಕಂಡುಕೊಳ್ಳಬೇಕು. ಮಕ್ಕಳಲ್ಲಿ ದೇಶದ ಬಗ್ಗೆ ಕನಸುಗಳನ್ನು ಬಿತ್ತಬೇಕು. ಸಂಘಟಿತವಾಗಿ ಸಮಾಜದ ಜೊತೆ ಬೆರೆಯಬೇಕು. ಯಾವುದೇ ಕೆಲಸ ಕಾರ್ಯಗಳು ಸಮಯ ಬಂದಾಗ ಸರಿಯಾದ ರೀತಿಯಲ್ಲಿ ನಡೆಯುತ್ತದೆ ಎಂದು ಕರ್ನಾಟಕದ ಸರಕಾರ ಬಾಲಭವನ ಸೊಸೈಟಿ ಮಾಜಿ ಅಧ್ಯಕ್ಷೆ, ಸುಲೋಚನಾ ಜಿ.ಕೆ. ಭಟ್ ಹೇಳಿದರು. ಅವರು ನೆಲ್ಲಿಕುಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ಶ್ರೀ ರಾಮಚಂದ್ರಾಪುರ ಮಠ 'ಮಾತೃತ್ವಂ' ಅಧ್ಯಕ್ಷೆ ಈಶ್ವರಿ ಬೇರ್ಕಡವು ಮಾತನಾಡಿ, ದೈವಿಕತೆಯನ್ನು ಪ್ರಚೋದಿಸುವ ಶಕ್ತಿ ಪಂಚಭೂತಗಳಲ್ಲಿವೆ. ಮಕ್ಕಳು ಹಿರಿಯರು ಕಲಿಸಿದ ಸಂಸ್ಕಾರವನ್ನು ಅನುಸರಿಸಬೇಕು ಎಂದರು.
ಎಣ್ಮಕಜೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ರೂಪವಾಣಿ ಆರ್. ಭಟ್ ಮಾತನಾಡಿ, ದೈವಿಕ ಶಕ್ತಿಯ ಪ್ರೇರಣೆಯಿಂದ ಶ್ರೀಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಅಚ್ಚರಿ ಪಡುವ ರೀತಿಯಲ್ಲಿ ನಡೆದಿವೆ. ಸಮಾಜದಲ್ಲಿ ಬದಲಾವಣೆ ವ್ಯಕ್ತಿಯಿಂದ ಆರಂಭವಾಗುತ್ತದೆ ಮತ್ತು ಅದು ಇತರರಿಗೆ ಪ್ರೇರಣೆಯಾಗುತ್ತದೆ. ನಾವೆಲ್ಲರೂ ಬದಲಾವಣೆಗೆ ಕಾರಣರಾಗೋಣ ಎಂದರು. ಬದಿಯಡ್ಕ ಗ್ರಾ.ಪಂ. ಉಪಾಧ್ಯಕ್ಷೆ ಅಶ್ವಿನಿ ಕೆ. ಎಂ. ಅಧ್ಯಕ್ಷತೆ ವಹಿಸಿದ್ದರು. ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಶ್ಯಾಮಲಾ ಆರ್.ಭಟ್, ಬ್ಲಾಕ್ ಪಂ. ಸದಸ್ಯೆ ವಿದ್ಯಾಕುಮಾರಿ, ಕುಂಬ್ಡಾಜೆ ಗ್ರಾ.ಪಂ ಅಧ್ಯಕ್ಷೆ ಯಶೋದಾ, ಕುಂಬ್ಡಾಜೆ ಗ್ರಾಪಂ ಸದಸ್ಯೆ ನಯನಾ, ಎಣ್ಮಕಜೆ ಗ್ರಾ.ಪಂ ಕುಸುಮಾವತಿ ಅಧ್ಯಕ್ಷೆ, ಸದಸ್ಯೆ ವಿಜಯ ಕೆ. ಸಿ., ಬದಿಯಡ್ಕ ಗ್ರಾ.ಪಂ ಸದಸ್ಯೆ ಉಷಾ ಮಾತನಾಡಿದರು. ಶುಭಲತಾ ಸುರೇಶ್ ನೆಲ್ಲಿಕುಂಜೆ ಸ್ವಾಗತಿಸಿ, ಡಾ. ಗಾಯತ್ರಿ ಎಂ.ರಾವ್ ನೆಲ್ಲಿಕುಂಜೆ ವಂದಿಸಿದರು. ದಿವ್ಯಾ ಶಿರಂತಡ್ಕ ನಿರೂಪಿಸಿದರು.

0 Comments