Ticker

6/recent/ticker-posts

Ad Code

ಮಂಜೇಶ್ವರದಲ್ಲಿ ಕಾರಿನಲ್ಲಿ ಎಂಡಿಎಂಎ ಸಾಗಣೆ : 50 ಗ್ರಾಂ ಮಾದಕ ವಸ್ತುವಿನೊಂದಿಗೆ ಮೂವರ ಬಂಧನ


ಮಂಜೇಶ್ವರ : ಕಾರಿನಲ್ಲಿ 50 ಗ್ರಾಂ ಎಂಡಿಎಂಎ ಸಾಗಿಸುತ್ತಿದ್ದ ಮೂವರನ್ನುಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭಾಸ್ಕರ ರೆಡ್ಡಿ ಅವರಿಗೆ ಲಭಿಸಿದ ರಹಸ್ಯ ಮಾಹಿತಿಯ ಆಧಾರದ ಮೇಲೆ, ಮಂಜೇಶ್ವರ ಪೊಲೀಸರು ಹಾಗೂ ಜಿಲ್ಲಾ ಪೊಲೀಸ್‌ ವಿಶೇಷ ದಳ ಸಂಯುಕ್ತ ಕಾರ್ಯಾಚರಣೆ ನಡೆಸಿದರು. ಮಂಜೇಶ್ವರ ಕೆದುಂಬಾಡಿಯ ಪಾವೂರು ಸ್ನೇಹಾಲಯದ ಸಮೀಪ ಕಾರನ್ನು ತಡೆದು ನಿಲ್ಲಿಸಿ ಈ ಕಾರ್ಯಾಚರಣೆ ಕೈಗೊಳ್ಳಲಾಯಿತು. 
ಬಂಧಿತರನ್ನು ಕಾಸರಗೋಡು ಆಲಂಪಾಡಿ ಟಿಪ್ಪುನಗರ ನಿವಾಸಿ ಸಿ.ಎ. ಮುಹ್ಮದ್ ಸಹಾಲ್, ಎರ್ನಾಕುಳಂ ನಾರ್ತ್ ಪರವೂರು ನಿವಾಸಿ ಅರುಣ್ ಕುಮಾ‌ರ್ ಹಾಗೂ ಕೋಝಿಕ್ಕೋಡ್ ಪುತ್ತೂರು ಮಯೂರ ಹೌಸ್‌ನ ಎಂ.ಪಿ. ಅನುಷ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳ ವಿರುದ್ಧ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Post a Comment

0 Comments