ಪೆರ್ಲ : ಮಣಿಯಂಪಾರೆಯಲ್ಲಿ ಜೀನಸು ವ್ಯಾಪಾರಸ್ಥರಾಗಿ ಗುರುತಿಸಿಕೊಂಡಿದ್ದ ಕೆ.ಅಬ್ದುಲ್ಲ (76) ಇಂದು ನಿಧನರಾದರು. ಕಾಂಗ್ರೆಸ್ ಪಕ್ಷದ ಅಭಿಮಾನಿಯಾಗಿದ್ದ ಇವರು ಪತ್ನಿ ಅಸಿಯಮ್ಮ, ಮಕ್ಕಳಾದ ಝುಲ್ಪಿ, ರಿಯಾಸ್, ಆರೀಫ್, ನಿಶಾ ಎಂಬಿವರನ್ನಗಲಿದ್ದಾರೆ.
ಮೃತರ ನಿಧನಕ್ಕೆ ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್, ಎಣ್ಮಕಜೆ ಪಂ.ಅಧ್ಯಕ್ಷೆ ಕುಸುಮಾವತಿ ಬಿ, ಉಪಾಧ್ಯಕ್ಷ ಸಿದ್ದೀಕ್ ವಳಮುಗೇರ್, ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಶೇಣಿ ಸಹಿತ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

0 Comments