ಬದಿಯಡ್ಕ : ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಕ್ಷೇತ್ರಾಚಾರ್ಯ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರನ್ನು ಶ್ರೀಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯ ವತಿಯಿಂದ ಭಕ್ತಿಭಾವಗಳೊಂದಿಗೆ ಪೂರ್ಣಕುಂಭ ಸ್ವಾಗತ ನೀಡಿ ವಾದ್ಯಘೋಷಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಶನಿವಾರ ಬೆಳಗ್ಗೆ ಆಗಮಿಸಿದ ತಂತ್ರಿಗಳವರನ್ನು ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲಗುತ್ತು ಪುಷ್ಪ ಮಾಲೆಯನ್ನು ಹಾಕಿ ಸ್ವಾಗತಿಸಿದರು.
ಕ್ಷೇತ್ರದ ಅರ್ಚಕ ಶಿವರಾಮ ಭಟ್ ಪೆರಡಾಲ, ವೆಂಕಟೇಶ್ವರ ಭಟ್ ಪಟ್ಟಾಜೆ, ಮೊಕ್ತೇಸರರುಗಳಾದ ಸೀತಾರಾಮ ನವಕಾನ ಹಾಗೂ ಕೃಷ್ಣ ಬದಿಯಡ್ಕ, ಮಾಜಿ ಮೊಕ್ತೇಸರ ಚಂದ್ರಹಾಸ ರೈ ಪೆರಡಾಲಗುತ್ತು, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶ್ಯಾಮಪ್ರಸಾದ ಮಾನ್ಯ, ಮಹೇಶ್ ವಳಕ್ಕುಂಜ, ಭಾಸ್ಕರ ಪಂಜಿತ್ತಡ್ಕ, ಅವಿನಾಶ್ ರೈ, ಗಂಗಾಧರ ಗೋಳಿಯಡ್ಕ, ಬಾಲಕೃಷ್ಣ ಶೆಟ್ಟಿ ಕೆ., ಸದಾಶಿವ ಮುರಿಯಂಕೂಡ್ಲು, ಡಾ. ಶ್ರೀಶ ಕುಮಾರ ಪಂಜಿತ್ತಡ್ಕ, ವಿನಯ ಜೆ.ರೈ, ಮಾತೃಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.
ಉಚಿತ ಬಸ್ ಸೇವೆ :
ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಭಗವದ್ಭಕ್ತರ ಅನುಕೂಲಕ್ಕಾಗಿ ಉಚಿತ ಬಸ್ ಸೇವೆಯನ್ನು ಕಲ್ಪಿಸಲಾಗಿದೆ. ಬದಿಯಡ್ಕ ಮೇಲಿನ ಪೇಟೆಯಿಂದ ಹಾಗೂ ನೀರ್ಚಾಲು ಸಮೀಪದ ಕನ್ಯಪ್ಪಾಡಿಯಿಂದ ಈ ಬಸ್ ಸೇವೆ ಲಭ್ಯವಿದೆ.

0 Comments