Ticker

6/recent/ticker-posts

Ad Code

ವಿಪರೀತ ಹೆಚ್ಚಾದ ತಾಪಮಾನ : ಹಲವರಿಗೆ ಬಿಸಿಲಿನ ಆಘಾತ; ಎಲ್ಲೋ ಅಲರ್ಟ್


ಕಾಸರಗೋಡು : ಕಾಸರಗೋಡಿನಲ್ಲಿ  ಬಿಸಿಲಿನ ಆಘಾತವಾದ ಘಟನೆ  ವರದಿಯಾಗಿದೆ. ಚೌಕಿ ಕಲ್ಲಂಗೈಯ ಪೈಂಟಿಂಗ್ ಕೆಲಸಗಾರ ಅಶ್ವಿನ್ (25) ಬಿಸಿಲಿನ ತಾಪದಿಂದ ಆಘಾತಕ್ಕೊಳಗಾಗಿದ್ದಾರೆ.  ಅವರು  ಆಲಂಪಾಡಿಯ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಅವರಿಗೆ ಸುಟ್ಟ ಗಾಯವಾಗಿದೆ. ಮೊದಲಿಗೆ ಅವರು  ಗಮನ ಹರಿಸದಿದ್ದರೂ, ಬಳಿಕ ಅವರ ದೇಹದ ಹೊರಭಾಗದಲ್ಲಿ ಸುಟ್ಟ ಗುರುತುಗಳು ಕಂಡುಬಂದವು.  
 ಕಾಞಂಗಾಡ್ ಅಜನೂರಿನ ಮೊಹಮ್ಮದ್ ಜುಬೈದ್ (13)ನಿಗೆ ಬಿಸಿಲಿನ ಆಘಾತವಾಗಿದೆ. ಫುಟ್ಬಾಲ್ ಆಡುವಾಗ ಈ ಘಟನೆ ಸಂಭವಿಸಿದ್ದು ಅಜನೂರಿನ ಕಮ್ಯೂನಿಟಿ ಅರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು. ಶನಿವಾರ ರಾಜ್ಯದ 12 ಜಿಲ್ಲೆಗಳಲ್ಲಿಯೂ ಹೆಚ್ಚಿನ ತಾಪಮಾನ ಕಂಡುಬಂದಿದೆ. ತಿರುವನಂತಪುರ ಮತ್ತು ವಯನಾಡ್ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿ ಎಲ್ಲೋ  ಅಲರ್ಟ್ ಘೋಷಿಸಲಾಗಿದೆ. ಇಂದು ಪಾಲಕ್ಕಾಡ್ ಜಿಲ್ಲೆಯಲ್ಲಿ ಅತಿ ಹೆಚ್ಚು (40 ಡಿಗ್ರಿ ಸೆಲ್ಸಿಯಸ್) ತಾಪಮಾನ ದಾಖಲಾಗಿದೆ. ಕಾಸರಗೋಡಿನಲ್ಲಿ 37 ಡಿಗ್ರಿ ಸೆಲ್ಸಿಯಸ್ ತಾಪಮಾನ  ಅನುಭವವಾಗಿದೆ.

Post a Comment

0 Comments