ಕುಂಬಳೆ : ಹಿಂದುಳಿದ ಜಿಲ್ಲೆ ಕಾಸರಗೋಡಿಗೆ ರಾಜ್ಯ ಬಜೆಟ್‌ನಲ್ಲಿ ಘೋಷಣೆಯಾದ ಯೋಜನೆಗಳನ್ನು ಯುಡಿಎಫ್ ಕಾರ್ಯಕರ್ತರು ಸ್ವಾಗತಿಸಿ ಹರ್ಷ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಕಾಳಜಿ ವಹಿಸಲಿದೆ ಎಂದು ಮುಖ್ಯಮಂತ್ರಿ ವಿ.ಡಿ.ಸತೀಶನ್ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದು ಇದರಿಂದ ಜಿಲ್ಲೆಯ ನೂರಾರು ಕುಟುಂಬಗಳಿಗೆ ಹಾಗೂ ಎಂಡೋಸಲ್ಫಾನ್ ಪೀಡಿತರಿಗೆ ನೆಮ್ಮದಿಯ ಯೋಜನೆಗಳನ್ನು ಮೀಸಲಿರಿಸುವ ಭರವಸೆ ಲಭಿಸಿದೆ.
ಮಂಜೇಶ್ವರ ತಾಲೂಕಿಗೆ ನೂತನ ತಾಲೂಕು ಕಚೇರಿ ಒಳಗೊಂಡ ರೆವೆನ್ಯೂ ಟವರ್ ನಿರ್ಮಿಸಲಾಗುವುದೆಂದು ಮುಖ್ಯಮಂತ್ರಿ ವಿ. ಡಿ. ಸತೀಶನ್ ರಾಜ್ಯ ಮುಂಗಡ ಪತ್ರ ಮಂಡನೆಯಲ್ಲಿ ಘೋಷಿಸಿದರು. ಇದು ಮಂಜೇಶ್ವರ ಜನತೆಯ ಬಹುಕಾಲದ ಬೇಡಿಕೆಯಾಗಿದ್ದು, ವಿವಿಧ ಸರಕಾರಿ ಕಚೇರಿಗಳನ್ನು ಒಂದೇ ಕಟ್ಟಡದ ಸಂಕೀರ್ಣದಡಿ ಜೋಡಿಸುವ ಯೋಜನೆ ಇದಾಗಿದೆ.
ಕಾಸರಗೋಡು ತಾಲೂಕು ಹಾಗೂ ಮಂಜೇಶ್ವರ ತಾಲೂಕಿನ ಸಂಗಮ ಸ್ಥಳವಾದ ಉಕ್ಕಿನಡ್ಕದಲ್ಲಿ ಕಾರ್ಯಾಚರಿಸುತ್ತಿರುವ ಸರಕಾರಿ ವೈದ್ಯಕೀಯ ಕಾಲೇಜಿಗೆ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿ ಹೆಚ್ಚುವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ಗಳನ್ನು ಮುಂದುವರಿಸಲಾಗುವುದು ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡಲಾಗುವುದು, ವನ್ಯಜೀವಿ ಸಂಘರ್ಷವನ್ನು ತಗ್ಗಿಸಲು ಅಗತ್ಯ ಕ್ರಮಕೈಗೊಳ್ಳುವ ಮತ್ತು ಕೃಷಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

0 Comments