Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿಯ ಹೊಸ ಕಟ್ಟಡ ಉದ್ಘಾಟನೆ

ಕುಂಬಳೆ : ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿಯ ನೂತನ ಕಟ್ಟಡದ ಉದ್ಘಾಟನೆ ಜರಗಿತು. ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್.ಅಶ್ವಿನಿ ಉದ್ಘಾಟಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಮತ್ತು ಹಿರಿಯ ನಾಯಕ ವಿ. ರವೀಂದ್ರನ್ ಉದ್ಘಾಟನೆಗೂ ಮುನ್ನ ಧ್ವಜಾರೋಹಣ ಮಾಡಿದರು. ಕುಂಬಳೆ ಪಂಚಾಯತ್ ದಕ್ಷಿಣ ಕ್ಷೇತ್ರ ಸಮಿತಿ ಅಧ್ಯಕ್ಷ ಸುಜಿತ್ ರೈ ಅಧ್ಯಕ್ಷತೆ ವಹಿಸಿದ್ದರು. ಜನಸಂಘ ಹಾಗೂ ಬಿಜೆಪಿಯ ಆರಂಭಿಕ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸತೀಶ್ ಚಂದ್ರ ಭಂಡಾರಿ, ತುರ್ತು ಹೋರಾಟಗಾರ ಹಾಗೂ ಜನಸಂಘದ ಕಾರ್ಯಕರ್ತ ಸುಬ್ಬಯ್ಯ ರೈ, ಜಿಲ್ಲಾ ಉಪಾಧ್ಯಕ್ಷ ಮುರಳೀಧರ ಯಾದವ್, ಮಂಡಲ ಪ್ರಧಾನ ಕಾರ್ಯದರ್ಶಿ ವಸಂತಮಯ್ಯ, ಮಂಡಲ ಉಪಾಧ್ಯಕ್ಷರಾದ ವಿಕ್ರಮ್ ಪೈ, ಪ್ರೇಮಾವತಿ, ಕುಂಬಳೆ ಪಂಚಾಯತ್ ಉತ್ತರ ಕ್ಷೇತ್ರ ಸಮಿತಿ ಅಧ್ಯಕ್ಷ ಶಿವಪ್ರಸಾದ್ ರೈ, ಪಂಚಾಯತ್ ಜನಪ್ರತಿನಿಧಿಗಳು, ವಿನೋದ್ ಕೊಯಿಪ್ಪಾಡಿ ಕಡಪ್ಪರ ಸಹಿತ ಹಲವರು ಕಾರ್ಯಕರ್ತರು ಉಪಸ್ಥಿತರಿದ್ದರು.

Post a Comment

0 Comments


ಜಾಹೀರಾತು

Responsive Advertisement