Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

'ಶ್ರೀ ಸದಾಶಿವ ಶೆಟ್ಟಿ ಕುಳೂರು ಅಭಿಮಾನಿ ಬಳಗ'ದಿಂದ ಬೆರಿಪದವಿನಲ್ಲಿ ವಸ್ತ್ರದಾನ ಕಾರ್ಯಕ್ರಮ

ಪೈವಳಿಕೆ : ಸದಾಶಿವ ಶೆಟ್ಟಿ ಕುಳೂರು ಅವರ ಹುಟ್ಟು ಹಬ್ಬದ ಪ್ರಯುಕ್ತ 'ಶ್ರೀ ಸದಾಶಿವ ಶೆಟ್ಟಿ ಕುಳೂರು ಅಭಿಮಾನಿ ಬಳಗ' ಬೆರಿಪದವು ವಸ್ತ್ರದಾನ ಕಾರ್ಯಕ್ರಮವನ್ನು ಆಯೋಜಿಸಿತ್ತು. ವಿದ್ಯಾರಣ್ಯ ಎಯುಪಿ ಶಾಲೆ ಬೆರಿಪದವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷ್ಣಮೂರ್ತಿ ಶಾಂತಿಮೂಲೆ ಅವರು ಅಧ್ಯಕ್ಷತೆ ವಹಿಸಿದ್ದರು.

ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ 100 ಬಡ ಕುಟುಂಬಗಳಿಗೆ ವಸ್ತ್ರದಾನ ಮಾಡಲಾಯಿತು. ಸದಾಶಿವ ಶೆಟ್ಟಿ ಕುಳೂರು ಅವರ ಸಹೋದರ ಚಂದ್ರಹಾಸ ಶೆಟ್ಟಿ ಕುಳೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಯರಾಜ ಶೆಟ್ಟಿ ಚಾರ್ಲ, ಸತ್ತಾರ್ ಬಳ್ಳೂರು, ಸಂತೋಷ್ ಭಂಡಾರಿ ಪಟ್ಲ, ಸತೀಶ್ ಮಣಿಯಾಣಿ, ವಿದ್ಯಾರಣ್ಯ ಎಯುಪಿ ಶಾಲೆ ಮುಖ್ಯೋಪಾಧ್ಯಾಯರಾದ ಉಮೇಶ್ ಮಾಸ್ಟರ್, ಗಜಾನಂದ ಬೆರಿಪದವು ಮುಖ್ಯ ಅತಿಥಿಗಳಾಗಿದ್ದರು. ದೇವಿಪ್ರಸಾದ್ ಶೆಟ್ಟಿ ಪಟ್ಲ ಸ್ವಾಗತಿಸಿ, ಮುರಳಿಪ್ರಸಾದ್ ಬೆರಿಪದವು ವಂದಿಸಿದರು. ಪ್ರಕಾಶ್ ಮಾಸ್ಟರ್ ನಿರೂಪಿಸಿದರು.


Post a Comment

0 Comments

ಜಾಹೀರಾತು

Responsive Advertisement