Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪೆರ್ಲ-ಸ್ವರ್ಗ-ಸೂರಂಬೈಲು ರಸ್ತೆ ಅಭಿವೃದ್ಧಿ ಆಗ್ರಹಿಸಿ ಕಾಂಗ್ರೆಸ್ ಸಮಿತಿಯಿಂದ ಶಾಸಕರಿಗೆ ಮನವಿ


ಪೆರ್ಲ: ಪೆರ್ಲ- ಸ್ವರ್ಗ -ಸೂರಂಬೈಲು-ರಸ್ತೆ ಅಭಿವೃದ್ಧಿ ಆಗ್ರಹಿಸಿ ಕಾಂಗ್ರೆಸ್ ಎಣ್ಮಕಜೆ ಮಂಡಲ 8ನೇ ವಾರ್ಡ್ ಸಮಿತಿ (ಸ್ವರ್ಗ) ನೇತೃತ್ವದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅವರಿಗೆ ಮನವಿ ಸಲ್ಲಿಸಲಾಗಿದೆ. 

ಎಣ್ಮಕಜೆ ಪಂಚಾಯಿತಿಯ ಹೃದಯಭಾಗ, ಪೆರ್ಲ ಪೇಟೆಯಿಂದ ಪಾಣಾಜೆ ಮೂಲಕ ಪುತ್ತೂರು ಸಂಪರ್ಕಿಸುವ ಪೆರ್ಲ- ಸ್ವರ್ಗ ರಸ್ತೆಯ ಅಗಲ ವಿಸ್ತರಿಸಿ ನವೀಕರಿಸುವಂತೆ ಕಾಂಗ್ರೆಸ್ ಎಣ್ಮಕಜೆ ಮಂಡಲ 8ನೇ ವಾರ್ಡ್ ಸಮಿತಿ ಶಾಸಕರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಗಿದೆ‌.

ನೂರು ವರ್ಷಕ್ಕೂ ಈ ರಸ್ತೆ ನಿರ್ಮಿಸಲಾಗಿದೆ. ಕರ್ನಾಟಕದ ಪುತ್ತೂರು ಮಾತ್ರವಲ್ಲದೆ, ಬೆಳ್ಳೂರು ಪಂಚಾಯಿತಿ ಮೂಲಕ ಸುಳ್ಯಪದವು, ಈಶ್ವರಮಂಗಲ, ಮುಳ್ಳೇರಿಯ, ಕುಂಬ್ಡಾಜೆ ಪಂಚಾಯಿತಿಯ ಏತಡ್ಕ ಸಹಿತ ನಾನಾ ಭಾಗಗಳಿಗೆ ಸಂಪರ್ಕಿಸುವ ಪ್ರಧಾನ ರಸ್ತೆ ಇದಾಗಿದೆ. ಕಾಸರಗೋಡು, ಕುಂಬಳೆ, ಕರ್ನಾಟಕ ಭಾಗದಿಂದ ಖಾಸಗಿ ಬಸ್ ಈ ರಸ್ತೆ ಮೂಲಕ ಸಂಚರಿಸುತ್ತಿದೆ‌. 

ಸ್ವರ್ಗದಲ್ಲಿ ಪಡ್ರೆ ಗ್ರಾಮ ಕಚೇರಿ, ವಿವೇಕಾನಂದ ಎಯುಪಿ ಶಾಲೆ, ಕೇರಳ ಗ್ರಾಮೀಣ ಬ್ಯಾಂಕ್ , ಪೆರ್ಲ ಸೇವಾ ಸಹಕಾರಿ ಬ್ಯಾಂಕ್, ಅಕ್ಷಯ ಕೇಂದ್ರ, ವಾಣೀನಗರದಲ್ಲಿ ಒಂದನೇ ತರಗತಿಯಿಂದ ಪ್ಲಸ್ ಟು ತರಗತಿ ವರೆಗಿನ ಪಡ್ರೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಎಸ್ ಸಿ, ಎಸ್ ಟಿ ಹಾಸ್ಟೆಲ್, ಅಂಚೆ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿ ದಿನ ನೂರಾರು ವಾಹನಗಳು ಓಡಾಡುವ ರಸ್ತೆ ಇದಾಗಿದೆ. 

ಡಾಮರ್ ರಸ್ತೆಯ ಎರಡೂ ಮಗ್ಗುಲುಗಳು ಕತ್ತರಿಸಿದ ಸ್ಥಿತಿಯಲ್ಲಿದ್ದು, ವಾಹನ ಚಾಲನೆ ಸವಾಲಾಗಿದೆ. ಹಲವು ವರ್ಷಗಳಿಂದ ತೀರಾ ಹದಗೆಟ್ಟ ಸ್ಥಿತಿಯಲ್ಲಿರುವ ಈ ರಸ್ತೆಯನ್ನು ಸಾಕಷ್ಟು ಅಗಲ ವಿಸ್ತರಿಸಿ ನವೀಕರಣ ಗೊಳಿಸುವಂತೆ ಕಾಂಗ್ರೆಸ್ ಎಣ್ಮಕಜೆ ಮಂಡಲ 8ನೇ ವಾರ್ಡ್ ಸಮಿತಿ(ಸ್ವರ್ಗ) ಅಧ್ಯಕ್ಷ ಅಚ್ಚುತ ಸ್ವರ್ಗ, ಕಾರ್ಯದರ್ಶಿ ಲಕ್ಷ್ಮಣ ಪಡ್ಪು, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪಡ್ಪು, ಶಶಿರಾಜ್ ಕೊಡೆಂಕೀರಿ, ಉದಯರಾಜ್, ಜಗದೀಶ್  ನೇತೃತ್ವದಲ್ಲಿ ಶಾಸಕರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಗಿದೆ.

ಕೇರಳ ತೋಟಗಾರಿಕಾ ನಿಗಮದ ಗೇರು ತೋಟಗಳಲ್ಲಿ ದಶಕಗಳ ಕಾಲ ಹೆಲಿಕಾಪ್ಟರ್ ಮೂಲಕ ಎಂಡೋಸಲ್ಫಾನ್ ಕೀಟನಾಶಕವನ್ನು ಸಿಂಪಡಿಸಲಾಗಿದ್ದು, ಇದರ ಭೀಕರ ದುಷ್ಪರಿಣಾಮದಿಂದಾಗಿ ದೈಹಿಕ ಮತ್ತು ಮಾನಸಿಕ ವೈಕಲ್ಯಗಳಿಂದ ನರಳುತ್ತಿರುವ ಪ್ರದೇಶ ಇದೆಂದೂ ಶಾಸಕರಿಗೆ ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Post a Comment

0 Comments


ಜಾಹೀರಾತು

Responsive Advertisement