Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಧರ್ಮಸ್ಥಳ ಕೊಲೆ ಪ್ರಕರಣ: ನಾನು ಚಿನ್ನಯ್ಯನ ಜೊತೆ ಮಾತನಾಡಿದ್ದು ನಿಜ: ಪ್ರಕಾಶ್‌ ರಾಜ್‌

 


ಬೆಂಗಳೂರು: ಧರ್ಮಸ್ಥಳ ಪ್ರಕರಣದ ವಿಚಾರಣಾಧೀನ ಆರೋಪಿ ಚಿನ್ನಯ್ಯನ ಜೊತೆಗೆ ಮಾತನಾಡಿದ್ದು ನಿಜ, ಆತ ನನ್ನೊಂದಿಗೆ ತಮಿಳಿನಲ್ಲಿ ಮಾತನಾಡಿದ್ದ ಎಂದು ನಟ ಪ್ರಕಾಶ್‌ ರಾಜ್‌  ಒಪ್ಪಿಕೊಂಡಿದ್ದಾರೆ. 

ಬೆಂಗಳೂರಿನ  ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ  ತನ್ನ ಹೆಸರು ತಳುಕು ವಿಚಾರಕ್ಕೆ ಸ್ಪಷ್ಟನೆ ನೀಡುತ್ತಾ ಈ ವಿಚಾರ ತಿಳಿಸಿದ್ದು ಕೋರ್ಟ್ ನಲ್ಲಿ ಚಿನ್ನಯ್ಯ ಹೇಳಿಕೆ ನೀಡಿದ್ದಾನೆ. ಗಿರೀಶ್ ಮಟ್ಟಣ್ಣನವರು ಹೇಳಿದ ರೀತಿಯಲ್ಲಿ ಕೇಳಿದ್ರೆ ನಾನು ನಿನ್ನನ್ನು ಅಪ್ಪಿಕೊಳ್ತಿನಿ ಅಂದಿದ್ದೆ ಅಂತ ಹೇಳಿದ್ದಾನೆ. ಕೇರಳದಿಂದ ಹಣ ಬಂದಿದೆ ಅಂತಲೂ ಹೇಳಿ, ನನ್ನ ಹೆಸರು ಉಲ್ಲೇಖ ಮಾಡಿದ್ದಾನೆ. ಆದ್ರೆ ನಾನು ಯಾವತ್ತೂ ಧರ್ಮಸ್ಥಳಕ್ಕೆ ಹೋಗಿಲ್ಲ, ಗಿರೀಶ್ ಮಟ್ಟಣ್ಣನವರು ಅವರನ್ನ ಭೇಟಿಯಾಗಿಲ್ಲ ನಾನ್ಯಾಕೆ ಧರ್ಮಸ್ಥಳದ ವಿರುದ್ಧ ಷಡ್ಯಂತ ಮಾಡಲಿ ಎಂದಿದ್ದಾರೆ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬಂದವು. ನಾನು ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ ಎಸ್‌ಐಟಿ ರಚನೆಗೆ ಕೇಳಿದ್ದೆ. ಈ ಟೈಮಲ್ಲಿ ಒಬ್ಬ ವ್ಯಕ್ತಿ ಕರೆ ಮಾಡಿ ಮಾಸ್ಕ್ ಮ್ಯಾನ್ ಚಿನ್ನಯ್ಯ ಮಾತನಾಡಬೇಕು ಅಂದ. ನನ್ನ ಜೊತೆಗೆ ತಮಿಳಿನಲ್ಲಿ ಮಾತನಾಡಿದ, ಮೊಹಂತಿ ಸರ್ ಗೆ ಕರೆ ಮಾಡಿ ಆ ವಿಚಾರವನ್ನ ಹೇಳಿದ್ದೇನೆ. 

ಚಿನ್ನಯ್ಯ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿದ್ದಾನೆ ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ. ನಾನು ಏನೇ ಪ್ರಶ್ನೆ ಕೇಳಿದರೂ ನನ್ನನ್ನು ಹಿಂದೂ ವಿರೋಧಿ ಅಂತಾರೆ. ಈ ವಿಚಾರ ಇನ್ನೂ ಕೋರ್ಟಿನಲ್ಲಿದೆ

ಚಿನ್ನಯ್ಯ ಅಂತ ಪರಿಚಯ ಮಾಡ್ಕೊಂಡ ವ್ಯಕ್ತಿ, ನಂಗೆ ಕರೆ ಮಾಡಿ ನಿನ್ನ ಮೀಟ್ ಮಾಡಬೇಕು ಅಂದ. ಆಗ ನಾನ್ಯಾಕೆ ನಿನ್ನ ಮೀಟ್ ಮಾಡಬೇಕು, ನೀನು ಏನು ಹೇಳಬೇಕು ಅಂತ ಇದೀಯೋ ಅದನ್ನ ರೆಕಾರ್ಡ್ ಮಾಡಿ ಳಿಸು ಅಂತ ಹೇಳಿದ್ದೆ. ಪ್ರಣವ್ ಮೋಹಂತಿ ಸರ್‌ ಅವರನ್ನ ಭೇಟಿ ಮಾಡು ಅಂದಿದ್ದೆ ಎಂದು ಸ್ಪಷ್ಟನೆ ನೀಡಿದರು.

Post a Comment

0 Comments


ಜಾಹೀರಾತು

Responsive Advertisement