Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮೂರು ತಿಂಗಳಿನಿಂದ ಪಿಂಚಣಿ ಸಿಗದೆ ಖಿನ್ನತೆಗೊಳಗಾಗಿ ವೃದ್ಧೆ ಆತ್ಮಹತ್ಯೆ

 

SUICIDE : ಕಳೆದ ಮೂರು ತಿಂಗಳಿನಿಂದ ಪಿಂಚಣಿ ಸಿಗದ ಕಾರಣ ಖಿನ್ನತೆಗೊಳಗಾಗಿ 66 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಬೆನ್ನಲ್ಲೇ ಒಡಿಶಾದ  ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮೃತರನ್ನು ಗಂಜಾಂ ಜಿಲ್ಲೆಯ ಬೇಗುನಿಯಾಪದ ಬ್ಲಾಕ್‌ನ ಚಾಧೇಯಪದ ಗ್ರಾಮದ ಬಿ ಸಾಬಿತ್ರಿ ಡೋರಾ (66)ಎಂದು ಗುರುತಿಸಲಾಗಿದೆ. ಈ ಘಟನೆ ಭಾನುವಾರ ನಡೆದಿದ್ದರೂ ಮಂಗಳವಾರ ಬೆಳಕಿಗೆ ಬಂದಿದೆ. ತನ್ನ ಮೂವರು ಹೆಣ್ಣುಮಕ್ಕಳ ಮದುವೆಯ ನಂತರ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಇವರು  ಆಹಾರ ಭದ್ರತಾ ಯೋಜನೆಯಡಿಯಲ್ಲಿ ಮಾಸಿಕ 1,000 ರೂ. ಮತ್ತು 5 ಕೆಜಿ ಅಕ್ಕಿಯ ಮೇಲೆ ಅವರು ಸಂಪೂರ್ಣವಾಗಿ ಅವಲಂಬಿತರಾಗಿದ್ದರು. ಪಿಂಚಣಿ ಮೊತ್ತ ತಮ್ಮ ಖಾತೆಗೆ ಜಮಾ ಆಗಿರದ ಬಗ್ಗೆ ಅತೀವ ನೊಂದುಕೊಂಡಿದ್ದ ಇವರು ತೀವ್ರ ಖಿನ್ನತೆಗೊಳಗಾಗಿದ್ದರೆಂದು ತಿಳಿದು ಬಂದಿದೆ.

 ಅವರ ಸಾವಿನ ಮಾಹಿತಿ ಪಡೆದ  ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯನ್ನು ಪ್ರಾಥಮಿಕ ತನಿಖೆ ನಡೆಸುವಂತೆ ಆದೇಶಿಸಲಾಗಿದೆ.  ಫಲಾನುಭವಿಗಳಿಗೆ ಕಳೆದ ಮೂರು ತಿಂಗಳಿನಿಂದ ಮಾಸಿಕ ಪಿಂಚಣಿ ಸಿಕ್ಕಿಲ್ಲ. ಇದು ತಾಂತ್ರಿಕ ಸಮಸ್ಯೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Post a Comment

0 Comments


ಜಾಹೀರಾತು

Responsive Advertisement