Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಾಸರಗೋಡಿನಲ್ಲಿ ಅಟ್ಲಾಸ್ ಪ್ರಭೇದದ ಆಕರ್ಷಕ ಪತಂಗ ಪತ್ತೆ

ಕಾಸರಗೋಡು : ಏಷ್ಯಾದ ಕಾಡುಗಳಲ್ಲಿ ಸ್ಥಳೀಯವಾಗಿ ಕಂಡು ಬರುವ ಪತಂಗಗಳ ಪ್ರಭೇದದಲ್ಲಿ ಅತ್ಯಪೂರ್ವವಾದ ದೊಡ್ಡ ಸ್ಯಾಟರ್ನಿಡ್ ಪತಂಗವಾದ ಅಟ್ಲಾಸ್ ಚಿಟ್ಟೆ  ಕಾಸರಗೋಡಿನಲ್ಲಿ ಪತ್ತೆಯಾಗಿದೆ. ಇಲ್ಲಿನ ಅಮೈ ನಿವಾಸಿ ಸಂದೀಪ್ ಆಚಾರ್ಯರ ಮನೆಯಲ್ಲಿ ಸೋಮವಾರ ರಾತ್ರಿ ವೇಳೆ ಇದು ಏಕೈಕವಾಗಿ ಕಂಡು ಬಂದಿದ್ದು ಆಕರ್ಷಣೀಯವಾದ ಅಟ್ಲಾಸ್ ಚಿಟ್ಟೆ ಗಾತ್ರದಲ್ಲಿ ದೊಡ್ಡದಾಗಿದ್ದು,  ಅಗಲದ ರೆಕ್ಕೆಗಳನ್ನು ಹೊಂದಿದೆ. ರೆಕ್ಕೆಗಳು ಸಾಮಾನ್ಯವಾಗಿ 250mm ನಿಂದ 300mmವರೆಗೆ ಅಳತೆಯಿದ್ದು ರೆಕ್ಕೆಯ ಮೇಲ್ಮೈ ವಿಸ್ತೀರ್ಣದಲ್ಲಿ  ಅತೀ ಆಕರ್ಷಣೀಯವಾಗಿದೆ. ಹೆಚ್ಚಿನ ರೇಷ್ಮೆ ಪತಂಗಗಳಲ್ಲಿರುವಂತೆ, ಹೆಣ್ಣು ಗಂಡುಗಳಿಗಿಂತ ಗಮನಾರ್ಹವಾಗಿ ದೊಡ್ಡದಾಗಿದೆ ಮತ್ತು ಭಾರವಾಗಿ ಕಂಡು ಬಂದಿದೆ.

Post a Comment

0 Comments


ಜಾಹೀರಾತು

Responsive Advertisement