ಬದಿಯಡ್ಕ: ಪಶುಸಂಗೋಪನಾ ಇಲಾಖೆಯ ಆಶ್ರಯದಲ್ಲಿ ಕೈಗೊಂಡಿರುವ ಎಂಟನೇ ಹಂತದ ಕಾಲು ಬಾಯಿ ರೋಗ ಲಸಿಕೆ ವಿತರಣೆಯ ಕುಂಬ್ಡಾಜೆ ಪಂಚಾಯಿತಿ ಮಟ್ಟದ ಉದ್ಘಾಟನೆಯನ್ನು ಕ್ಷೀರ ಕೃಷಿಕ ಮಾಧವ ಭಟ್ ನಿವಾಸದಲ್ಲಿ ಪಂಚಾಯಿತಿ ಅಧ್ಯಕ್ಷೆ ಯಶೋದಾ ಎನ್. ಅವರು ಲಸಿಕೆ ಕಿಟ್ ಅನ್ನು ಲೈವ್‌ಸ್ಟೋಕ್ ಇನ್ಸ್‌ಪೆಕ್ಟರ್ ಗೋಪಾಲನ್ ಕೆ.ಎನ್.ಅವರಿಗೆ ಹಸ್ತಾಂತರಿಸುವ ಮೂಲಕ ನಿರ್ವಹಿಸಿದರು.
ಕುಂಬ್ಡಾಜೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ, ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾಂಕ ಎ.ಸಿ., ವಾರ್ಡು ಸದಸ್ಯರಾದ ಸೌಭಾಗ್ಯಲಕ್ಷ್ಮಿ ಕೆ., ಎಸ್. ಮೊಹಮ್ಮದ್ ಕುಂಞಿ, ಗೀತಾ ಡಿ., ಮಹೇಶ್ ಅಜ್ಜಿಮೂಲೆ, ಜಯನಗರ ಡೈರಿ ಸಹಕಾರ ಸಂಘದ ಕಾರ್ಯದರ್ಶಿ, ಸೂರ್ಯನಾರಾಯಣ ಭಟ್, ಅಶೋಕ ಜಿ., ವೆಟರ್ನರಿ ಸರ್ಜನ್ ಡಾ. ಶ್ರೀಲಾ ಎಲ್, ಲೈವ್ ಸ್ಟೋಕ್ ಇನ್ಸ್‌ಪೆಕ್ಟರ್‌ಗಳಾದ ಆದರ್ಶ್ ಜೆ., ಆಸಿಫ್ ಹೈದರ್, ಜಯನ್ ಪಿ.ಪಿ., ಮತ್ತು ಸಿಬ್ಬಂದಿ ತಂಗಮಣಿ ಭಾಗವಹಿಸಿದರು.
ಎಂಟನೇ ಹಂತದ ಕಾಲುಬಾಯಿ ರೋಗ ಪ್ರತಿ ರೋಧ ಚುಚ್ಚುಮದ್ದು ವಿತರಣೆಯು ಜುಲೈ ೧೩ರ ತನಕ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯಲಿದೆ.

0 Comments