ಪೆರ್ಲ : ಖಂಡಿಗೆಯಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಶ್ರೀಕೃಷ್ಣ ಮಂದಿರದ ಶಿಲಾನ್ಯಾಸ ಕಾರ್ಯಕ್ರಮವನ್ನು ವೇದಮೂರ್ತಿ ಶಿವಸುಬ್ರಹ್ಮಣ್ಯ ಭಟ್ ಶುಳುವಾಳಮೂಲೆ ಇವರ ನೇತೃತ್ವದಲ್ಲಿ ಮಾಣಿಲ ಶ್ರೀಧಾಮದ ಪರಮಪೂಜ್ಯ ಶ್ರೀ ಮೋಹನದಾಸ ಸ್ವಾಮೀಜಿಯವರು ನೆರವೇರಿಸಿದರು. ಶಿಲ್ಪಿಗಳಾದ ವಿಷ್ಣು ಆಚಾರ್ಯ ಪುತ್ತಿಗೆ, ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಸಮಿತಿ ಅಧ್ಯಕ್ಷ ಸದಾಶಿವ ಭಟ್ ಹರಿನಿಲಯ, ಪ್ರಧಾನ ಕಾರ್ಯದರ್ಶಿ ಶಂಕರ ಕುಲಾಲ್ ಖಂಡಿಗೆ, ಕೋಶಾಧಿಕಾರಿ ಉದಯ ಚೆಟ್ಟಿಯಾರ್ ಬಜಕೂಡ್ಲು, ಕಿಶೋರ್ ಕುಮಾರ್ ಶೇಣಿ ಸಹಿತ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶ್ರೀಕೃಷ್ಣ ನಿಧಿ ಯೋಜನೆಯ ಮೊದಲ ಅದೃಷ್ಟವಂತರಾದ ರೇವತಿ ಪೆರ್ನೆ ಇವರಿಗೆ ಶ್ರೀಗಳು ಬಹುಮಾನವನ್ನು ಹಸ್ತಾಂತಿಸಿದರು.

.jpeg)
0 Comments