ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿನ ಖಂಡಿಗೆಯ ಪೂಪಾಡಿಕಲ್ಲು ಎಂಬಲ್ಲಿ ಶ್ರೀಕೃಷ್ಣ ಸೇವಾ ಸಮಿತಿ ವತಿಯಿಂದ ನಿರ್ಮಾಣಗೊಳ್ಳಲಿರುವ ನೂತನ ಶ್ರೀಕೃಷ್ಣ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಜೂ.18 ಗುರುವಾರ ಬೆಳಿಗ್ಗೆ ಗಂಟೆ 8.11ರಿಂದ 8.40ರ ಒಳಗಿನ ಕರ್ಕಾಟಕ ಲಗ್ನ ಶುಭಮುಹೂರ್ತದಲ್ಲಿ ನಡೆಯಲಿದೆ.
ನೂತನ ಮಂದಿರದ ನಿರ್ಮಾಣ ಕಾರ್ಯದಂಗವಾಗಿ ಮಾಣಿಲ ಶ್ರೀಧಾಮದ ಪರಮಪೂಜ್ಯ ಯೋಗಿಕೌಸ್ತುಭ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಅಮೃತಹಸ್ತದಿಂದ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದ್ದು ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಶ್ರೀ ಕೃಷ್ಣ ಭಟ್ ಖಂಡಿಗೆ, ಬಿ ವಸಂತ ಪೈ ಬದಿಯಡ್ಕ, ಸುಬ್ರಾಯ ನಾಯಕ್ ಖಂಡಿಗೆ, ಶಿವಸುಬ್ರಹ್ಮಣ್ಯ ಭಟ್ ಶುಳುವಾಲಮೂಲೆ, ಚಂದ್ರಶೇಖರ ನಾವಡ ಬಜಕೂಡ್ಲು, ಪುಟ್ಟಪ್ಪ ಖಂಡಿಗೆ, ಸದಾಶಿವ ಭಟ್ ಹರಿನಿಲಯ, ಪುರುಷೋತ್ತಮ ನಾಯಕ್ ಖಂಡಿಗೆ, ಶಂಕರ ಕುಲಾಲ್ ಖಂಡಿಗೆ, ಉದಯ ಚೆಟ್ಟಿಯಾರ್ ಬಜಕೂಡ್ಲು ಮೊದಲಾದವರು ಪಾಲ್ಗೊಳ್ಳುವರು. ಶ್ರೀಕೃಷ್ಣ ಸೇವಾ ಸಮಿತಿ, ನೂತನ ಮಂದಿರ ನಿರ್ಮಾಣ ಸಮಿತಿ, ಶ್ರೀಕೃಷ್ಣ ಮಾತೃ ಸಮಿತಿ ಕಾರ್ಯಕ್ರಮದ ನೇತೃತ್ವವಹಿಸುವರು.

0 Comments