Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಏರಿಕೆ ಕಂಡ ಚಿನ್ನದ ಬೆಲೆ : ಬೆಳ್ಳಿ ಬೆಲೆಗೆ ಯಥಾಸ್ಥಿತಿ

ತಿರುವನಂತಪುರ : ಕೇರಳದಲ್ಲಿ ನಾಲ್ಕು ದಿನಗಳ ಬೆಲೆ ಕುಸಿತದ ಬಳಿಕ ಚಿನ್ನದ ಬೆಲೆಯಲ್ಲಿ ಇಂದು ಅಲ್ಪ ಏರಿಕೆ ಕಂಡುಬಂದಿದೆ. ಇಂದು ಪ್ರತಿ ಪವನ್ ಗೆ  160 ಮತ್ತು ಪ್ರತಿ ಗ್ರಾಂ ಗೆ 20 ರೂ. ಏರಿಕೆಯಾಗಿದೆ. ಇದರೊಂದಿಗೆ ಒಂದು ಪವನ್ ಚಿನ್ನದ ಬೆಲೆ 1,07,120 ರೂ.ಗೆ ಏರಿಕೆಯಾಗಿದ್ದು, ಗ್ರಾಂ ಬೆಲೆ 13,390 ರೂ.ಗೆ ಏರಿಕೆಯಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಪವನ್ ಬೆಲೆಯಲ್ಲಿ 4,160 ರೂ.ಗಳ ಭಾರೀ ಕುಸಿತದ ನಂತರ ಈ ಸ್ವಲ್ಪ ಚೇತರಿಕೆ ಬಂದಿದೆ. ಇದೇ ವೇಳೆ ಇತರ ಕ್ಯಾರೆಟ್‌ಗಳಲ್ಲೂ ಚಿನ್ನದ ಬೆಲೆ ಏರಿಕೆಯಾಗಿದೆ. ಇಂದು 18 ಕ್ಯಾರೆಟ್ ಚಿನ್ನ ಗ್ರಾಂ ಗೆ 11,005 ರೂ., 14 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 8,570 ರೂ. 9 ಕ್ಯಾರೆಟ್ ಚಿನ್ನ ಪ್ರಸ್ತುತ ಪ್ರತಿ ಗ್ರಾಂಗೆ 5,530 ರೂ. ಕಂಡು ಬಂದಿದೆ, ರಾಜ್ಯದಲ್ಲಿ ಬೆಳ್ಳಿ ಬೆಲೆ ಇಂದು ಯಥಾಸ್ಥಿತಿಯಲ್ಲಿದೆ. ಬೆಳ್ಳಿ ಪ್ರತಿ ಗ್ರಾಂಗೆ 250 ರೂ.

Post a Comment

0 Comments


ಜಾಹೀರಾತು

Responsive Advertisement