ಕಾಸರಗೋಡು : ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಆಧುನಿಕ ತಂತ್ರಜ್ಞಾನವನ್ನು ಮನರಂಜನೆಗಾಗಿ ಮಾತ್ರವಲ್ಲದೆ ಜ್ಞಾನಗಳಿಸಲು ಸಹ ಬಳಸಬೇಕು ಮತ್ತು ತಂತ್ರಜ್ಞಾನ ದುರುಪಯೋಗವಾಗದಂತೆ ಪೋಷಕರು ಖಚಿತಪಡಿಸಿಕೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್.ಅಶ್ವಿನಿ ಹೇಳಿದರು. ಅವರು ಕೂಡ್ಲು ಗೋಪಾಲಕೃಷ್ಣ ವಿದ್ಯಾಲಯದಲ್ಲಿ ನಡೆದ ಮಧೂರು ಎಸ್.ಸಿ. - ಎಸ್.ಟಿ. ಪಂಚಾಯತ್ ಸಮಿತಿ ಆಯೋಜಿಸಿದ್ದ ಎಸ್.ಸಿ. - ಎಸ್.ಟಿ. ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಳೆದ 12 ವರ್ಷಗಳಲ್ಲಿ ಕೇಂದ್ರ ಸರ್ಕಾರ ಶಿಕ್ಷಣ ಸೇರಿದಂತೆ ಮೂಲಸೌಕರ್ಯ ಕ್ಷೇತ್ರದಲ್ಲಿ ಭಾರೀ ಹೂಡಿಕೆ ಮಾಡಿದೆ. ಎಸ್.ಸಿ. - ಎಸ್.ಟಿ. ಜನರನ್ನು ಆರ್ಥಿಕವಾಗಿ ಸಬಲಗೊಳಿಸುವ ಧ್ಯೇಯವನ್ನು ನರೇಂದ್ರ ಮೋದಿ ಅವರು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ ಎಂದು ಅಶ್ವಿನಿ ತಿಳಿಸಿದರು. ಸಮಾರಂಭದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಬಿರ್ಸಾ ಮುಂಡಾ ಅನ್‌ಸಂಗ್ ಹೀರೋ ಪ್ರಶಸ್ತಿ ಪಡೆದ ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಸಂಜೀವ ಪುಳಿಕೂರ ಅವರನ್ನು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಹಾಗೂ ಮಧೂರು ಪಂಚಾಯತ್ ಸಮಿತಿಯ ಪರವಾಗಿ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಎಂ.ಎಲ್.ಅಶ್ವಿನಿ ಸನ್ಮಾನಿಸಿದರು. ಎಸ್ ಸಿ - ಎಸ್ ಟಿ ಮೋರ್ಚಾ ಮಧೂರು ಪಂಚಾಯತ್ ಸಮಿತಿ ಅಧ್ಯಕ್ಷ ಮೋಹನನ್ ಕಾಳ್ಯಂಗಾಡು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಹಾಗೂ ಜಿಲ್ಲಾ ಪಂಚಾಯತ್ ಪ್ರತಿನಿಧಿ ರಾಮಪ್ಪ ಮಂಜೇಶ್ವರ, ಮಧೂರು ಪಂಚಾಯತ್ ಅಧ್ಯಕ್ಷೆ ಸುಜ್ಞಾನಿ ಶಾನಬಾಗ್, ಪಂಚಾಯತ್ ಉಪಾಧ್ಯಕ್ಷ ಭಾನುಪ್ರಕಾಶ್, ಸಂಜೀವ ಪುಳಿಕ್ಕೂರು, ಸುಕುಮಾರ್ ಕುದುರೆಪ್ಪಾಡಿ, ಮಧೂರು ಪಂಚಾಯತ್ ಏರಿಯಾ ಅಧ್ಯಕ್ಷ ಮಾಧವ ಮಾಸ್ತರ್, ಮಹೇಶ್ ಮಧೂರು, ಎಸ್ಟಿ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಹರೀಶ್ ಕೊಲ್ಲಂಗಾನ, ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಗೋಪಾಲಕೃಷ್ಣನ್, ಬ್ಲಾಕ್ ಪಂಚಾಯತಿ ಸದಸ್ಯೆ ಲೀಲಾ, ಮಧೂರು ಪಂಚಾಯಿತಿ ಸದಸ್ಯರಾದ ನವನೀತ ರೈ, ಚಂದ್ರು ಬಿ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಕಾಳ್ಯಂಗಾಡು ಮೊದಲಾದವರು ಮಾತನಾಡಿದರು.
0 Comments