Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಸಂಚಲನ ಮೂಡಿಸಿದ ಸಂಘಟನೆಯೊಳಗಿನ ಭಿನ್ನಾಭಿಪ್ರಾಯ : ಮಲಯಾಳಂ ಚಲನಚಿತ್ರ ಕಲಾವಿದರ 'ಅಮ್ಮ' ಸಂಘಟನೆ ಸದಸ್ಯರು ಸಮೂಹ ರಾಜಿನಾಮೆ

 

ಕೊಚ್ಚಿ: ಮಲಯಾಳಂ ಚಲನಚಿತ್ರ ಕಲಾವಿದರ ಸಂಘಟನೆಯಾದ 'ಅಮ್ಮ'  ಆಡಳಿತ ಸಮಿತಿ   ಸಾಮೂಹಿಕವಾಗಿ ರಾಜೀನಾಮೆ ನೀಡುವುದರ ಮೂಲಕ ರಾಜ್ಯದ ಚಲನಚಿತ್ರ ರಂಗದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಆಡಳಿತ ಸಮಿತಿಯಲ್ಲಿದ್ದ ಎಲ್ಲಾ 17 ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸಮಿತಿಯ ಅವಧಿ ಪೂರ್ಣಗೊಳ್ಳಲು ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಈ ಬೆಳವಣಿಗೆ ನಡೆದಿರುವುದು ತೀವ್ರ ಚರ್ಚಾಸ್ಪದವಾಗಿದೆ.

ಸಂಘಟನೆಯೊಳಗಿನ ಭಿನ್ನಾಭಿಪ್ರಾಯಗಳು, ವಾರ್ಷಿಕ ವರದಿ ವಿವಾದ ಹಾಗೂ ನಾಯಕತ್ವದ ವಿರುದ್ಧ ವ್ಯಕ್ತವಾಗಿದ್ದ ಅಸಮಾಧಾನಗಳ ನಡುವೆಯೇ ಈ ರಾಜೀನಾಮೆ ನಡೆದಿದೆ ಎಂದು ತಿಳಿದುಬಂದಿದೆ. ಚಲನಚಿತ್ರ ನಟಿ ಶ್ವೇತಾ ಮೆನೊನ್ ಅವರ ನೇತೃತ್ವದ ಆಡಳಿತ ಸಮಿತಿ 2025ರ ಆಗಸ್ಟ್ 15ರಂದು ಅಧಿಕಾರಕ್ಕೆ ಬಂದಿತ್ತು. ಆಗ ಶ್ವೇತಾ ಮೆನನ್ ಅವರನ್ನು ಅಧ್ಯಕ್ಷೆಯಾಗಿ ಹಾಗೂ ಕುಕ್ಕು ಪರಮೇಶ್ವರನ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿತ್ತು.

ಅಮ್ಮದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯರು ಸಂಘಟನೆಯ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದ ಸಂದರ್ಭ ಇದಾಗಿತ್ತು. ಆದರೆ ಈ ಆಡಳಿತ ಸಮಿತಿ ಕೇವಲ 310 ದಿನಗಳಷ್ಟೇ ಸಂಘಟನೆಯನ್ನು ಮುನ್ನಡೆಸಿದೆ. ಒಂದು ವರ್ಷದ ಅವಧಿಯನ್ನೂ ಪೂರ್ಣಗೊಳಿಸುವ ಮುನ್ನವೇ ಸಮಿತಿ ರಾಜೀನಾಮೆ ನೀಡಿರುವುದು ಗಮನಾರ್ಹವಾಗಿದೆ.

ಕೆಲವೊಂದು ವಿವಾದದ ಬಳಿಕ ಜತೆ ಕಾರ್ಯದರ್ಶಿಯಾಗಿದ್ದ ಅನ್ಸಿಬಾ ಹಸ್ಸನ್  ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆಡಳಿತ ಸಮಿತಿಯ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗುವ ಸಾಧ್ಯತೆ ಇದ್ದರೂ, ಅದನ್ನು ಎದುರಿಸುವುದಕ್ಕೂ ಮುನ್ನವೇ ಸಂಪೂರ್ಣ ಸಮಿತಿ ರಾಜೀನಾಮೆ ನೀಡಿರುವುದು ಇದೀಗ ಸಂಘಟನೆಯ ಕಾರ್ಯನಿರ್ವಹಣೆಯನ್ನು ಮುಂದುವರಿಸಲು  ತಾತ್ಕಾಲಿಕ ಸಮಿತಿ ರಚಿಸಲಾಗುತ್ತದೆ.  ನಂತರ ಶಾಶ್ವತ ಆಡಳಿತ ಸಮಿತಿಗಾಗಿ ಚುನಾವಣೆ ನಡೆಸಲಾಗುವುದು ಎಂದು ತಿಳಿದು ಬಂದಿದೆ.

Post a Comment

0 Comments



ಜಾಹೀರಾತು

Responsive Advertisement