Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಎಣ್ಮಕಜೆ ಪಂಚಾಯಿತಿಯ ಏಕೈಕ ಕನ್ನಡ ಮಾಧ್ಯಮ ಸರಕಾರಿ ಶಾಲೆ ಅಭಿವೃದ್ಧಿಯಲ್ಲಿ ಅವಗಣನೆಯತ್ತ

 

ಪೆರ್ಲ: ಕಾಸರಗೋಡು ಜಿಲ್ಲೆಯ ಎಣ್ಮಕಜೆ ಗ್ರಾಮ ಪಂಚಾಯಿತಿಯಲ್ಲಿ ಒಂದನೇ ತರಗತಿಯಿಂದ ಪ್ಲಸ್ ಟುವರೆಗೆ ಶಿಕ್ಷಣ ನೀಡುವ ಏಕೈಕ ಕನ್ನಡ ಮಾಧ್ಯಮ ಸರಕಾರಿ ಶಾಲೆ, ಪಡ್ರೆ ಗ್ರಾಮ ವಾಣೀನಗರದ ಪಡ್ರೆ ಸರಕಾರಿ ಶಾಲೆಯಲ್ಲಿ ಶಿಥಿಲಗೊಂಡಿರುವ ಉಪಯೋಗ ಶೂನ್ಯ ಕಟ್ಟಡಗಳು ಅಭಿವೃದ್ಧಿಗೆ ಅಡ್ಡಿಯಾಗಿದೆ. ಅಸಮತಲ ಜಾಗದ ಅಲ್ಲಲ್ಲಿ ನಿರ್ಮಿಸಲಾದ ಹಳೆಯ ಹಲವು ಕಟ್ಟಡಗಳು ಜೀರ್ಣಾವಸ್ಥೆಯಲ್ಲಿದೆ. ಫಿಟ್ನೆಸ್ ಲಭಿಸದ ಕಾರಣ ಗ್ರಂಥಾಲಯ, ಡೈನಿಂಗ್ ಹಾಲ್ ಕಟ್ಟಡ ಮುಚ್ಚಲಾಗಿದೆ. ಗ್ರೀನ್ ನೆಟ್ ಬಳಸಿ  ಈ ಎರಡೂ ಕಟ್ಟಡಗಳಿಗೆ ಮಕ್ಕಳ ಪ್ರವೇಶ ನಿರ್ಬಂಧಿಸಲಾಗಿದೆ.

ಪ್ರಸ್ತುತ 1 ಮತ್ತು 2ನೇ ತರಗತಿಗಳು ಶಾಲಾ ಕಚೇರಿಯ ಕೆಳಭಾಗದ ತಟ್ಟಿನ ಕಟ್ಟಡ 3 ಮತ್ತು 4ನೇ ತರಗತಿಗಳು ಶಾಲಾ ಕಚೇರಿಯ ಮೇಲ್ಬಾಗದ ಇನ್ನೊಂದು ತಟ್ಟಿನ ಕಟ್ಟಡ,  5, 6 ಮತ್ತು 7ನೇ ತರಗತಿ ಶಾಲಾ ಕಚೇರಿ ಕಟ್ಟಡದಲ್ಲಿದೆ. ಈ ತರಗತಿಗಳನ್ನು ಸ್ಮಾರ್ಟ್ ಕ್ಲಾಸ್‌ರೂಮ್ ಆಗಿ ಪರಿವರ್ತಿಸಲಾಗಿದ್ದರೂ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿಲ್ಲ.

ಶಾಲಾ ಕಚೇರಿ ಕೆಳಭಾಗದಲ್ಲಿ ಉದ್ದವಾದ ಆಯಾಮವನ್ನು ಹೊಂದಿರುವ ಎರಡು ಕಟ್ಟಡಗಳು ಶಿಥಿಲಗೊಂಡಿವೆ. ಫಿಟ್ನೆಸ್ ಲಭಿಸದೆ ಉಪಯೋಗ ಶೂನ್ಯವಾದ ಈ ಎರಡು ಬೃಹತ್ ಕಟ್ಟಡಗಳು ಶಾಲೆಯ ಬಹುತೇಕ ಜಾಗವನ್ನು ಕಬಳಿಸಿಕೊಂಡಿದೆ. ಈ ಕಟ್ಟಡಗಳನ್ನು ತೆರವುಗೊಳಿಸಿ, ಜಾಗ ಸಮತಟ್ಟುಗೊಳಿಸಿ 7 ಕೋಣೆಗಳ ಕಟ್ಟಡ ನಿರ್ಮಾಣವಾದರೆ ಎಲ್ ಪಿ, ಯುಪಿ ವಿಭಾಗದ ಸಮಸ್ಯೆ ಪರಿಹಾರವಾಗಲಿದೆ. 

ಪಡ್ರೆ ಶಾಲೆಯ ಹೈಸ್ಕೂಲ್ ವಿಭಾಗಕ್ಕೆ ಹಿಂದಿನ ಹೈಯರ್ ಸೆಕೆಂಡರಿ ಶಾಲೆಯ ಕಟ್ಟಡವನ್ನು ಬಳಸಲಾಗುತ್ತಿದೆ. ಈ ಕಟ್ಟಡ ಮುಖ್ಯ ರಸ್ತೆಯ ಇನ್ನೊಂದು ಬದಿಯಲ್ಲಿದೆ. ಮುಖ್ಯ ಶಿಕ್ಷಕರು, ಶಿಕ್ಷಕರ ಕಚೇರಿ ರಸ್ತೆಯ ಕೆಳ ಬದಿಯಲ್ಲಿದೆ. ಮಕ್ಕಳು, ಶಿಕ್ಷಕ ಸಿಬ್ಬಂದಿ ರಸ್ತೆ ದಾಟಬೇಕಾಗಿರುವುದು ಸಮಸ್ಯೆಯಾಗುತ್ತಿದೆ ಎನ್ನಲಾಗಿದೆ.

Post a Comment

0 Comments


ಜಾಹೀರಾತು

Responsive Advertisement