Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕೆಎಸ್ಸಾರ್ಟಿಸಿಯಲ್ಲಿ ಪ್ರಿಯದರ್ಶಿನಿ ಮಹಿಳೆಯರ ಉಚಿತ ಸಂಚಾರ ಯೋಜನೆ : ಉಪ್ಪಳದಲ್ಲಿ ಮಂಜೇಶ್ವರ ತಾಲೂಕು ಮಟ್ಟದ ಉದ್ಘಾಟನೆ

ಉಪ್ಪಳ : ಕೇರಳದ ಕೆಎಸ್ಸಾರ್ಟಿಸಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸುವ 'ಪ್ರಿಯದರ್ಶಿನಿ ಯೋಜನೆ'ಯ ಮಂಜೇಶ್ವರ  ಕ್ಷೇತ್ರ ಮಟ್ಟದ ಉದ್ಘಾಟನೆ ಇಂದು ಬೆಳಿಗ್ಗೆ ಉಪ್ಪಳದಲ್ಲಿ ನಡೆಯಿತು. ಶಾಸಕ ಎಕೆಎಂ ಅಶ್ರಫ್ ಅವರು ಬಸ್ಸಿನ ಡಬಲ್ ಬೆಲ್ ಬಾರಿಸಿದ್ದಲ್ಲದೇ ಧ್ವಜ ಹಾರಾಡಿಸಿ ಉದ್ಘಾಟಿಸಿದರು. ಬಸ್ಸಿನೊಳಗೆ ಎಣ್ಮಕಜೆ ಗ್ರಾ. ಪಂ. ಅಧ್ಯಕ್ಷೆ ಕುಸುಮಾವತಿ ಅವರಿಗೆ ಶಾಸಕರು ಮೊದಲ ಟಿಕೆಟ್ ಹಂಚಿದರು. ಬಳಿಕ ಬಸ್ಸಿನ ಮೊದಲ ಸಂಚಾರಕ್ಕೆ ಶುಭನಾಂದಿ ಪ್ರಾರ್ಥಿಸಿ ತೆಂಗಿನ ಕಾಯಿ ಒಡೆಯಲಾಯಿತು.  ಯುಡಿಎಫ್ ಸರಕಾರ ಹಾಗೂ ಶಾಸಕ ಎಕೆಎಂ ಅಶ್ರಫ್ ಅವರಿಗೆ ಶುಭಾಶಯದ ಅಭಿನಂದನೆ ಕೋರಿ ಕಾರ್ಯಕರ್ತರು ಸಂಭ್ರಮಿಸಿ ಸಿಹಿ ಹಂಚಿದರು.

ಉದ್ಘಾಟನಾ ಸಮಾರಂಭದಲ್ಲಿ ಡಿಸಿಸಿ ಕಾರ್ಯದರ್ಶಿಗಳಾದ ಸೋಮಶೇಖರ್ ಶೇಣಿ, ಲಕ್ಷ್ಮಣ ಪ್ರಭು ಕುಂಬಳೆ, ಮಂಜೇಶ್ವರ ಬ್ಲಾಕ್ ಪಂ. ಅಧ್ಯಕ್ಷ ಸೈಫುಲ್ಲಾ ತಂಙಳ್, ಅಝೀಝ್ ಮರಿಕ್ಕೆ, ಮಂಜುನಾಥ ಆಳ್ವ ಮಡ್ವ, ಅಬ್ಬಾಸ್ ಮಂಗಲ್ಪಾಡಿ, ಅಶ್ರಫ್ ಕಾರ್ಲೆ, ಕುಂಬಳೆ ಗ್ರಾ. ಪಂ. ಅಧ್ಯಕ್ಷ ವಿ. ಪಿ. ಅಬ್ದುಲ್ ಖಾದರ್, ಮಂಗಲ್ಪಾಡಿ ಪಂ. ಅಧ್ಯಕ್ಷ ಗೋಲ್ಡನ್ ಅಬ್ದುಲ್ ರೆಹ್ಮಾನ್, ಎ. ಕೆ. ಆರಿಫ್, ಅಝೀಝ್ ಕಳತ್ತೂರು, ಎಣ್ಮಕಜೆ ಪಂ. ಅಧ್ಯಕ್ಷೆ ಕುಸುಮಾವತಿ, ಪುತ್ತಿಗೆ ಪಂ. ಅಧ್ಯಕ್ಷೆ ಫಿದಾ ಉಜಂಪದವು, ಕುಂಬಳೆ, ಮಂಗಲ್ಪಾಡಿ, ಮಂಜೇಶ್ವರ, ಮೀಂಜ, ವರ್ಕಾಡಿ, ಪೖವಳಿಕೆ ಗ್ರಾ. ಪಂ. ಸದಸ್ಯರು ಮತ್ತು ಕಾರ್ಯಕರ್ತರು ಪಾಲ್ಗೊಂಡರು.

Post a Comment

0 Comments


ಜಾಹೀರಾತು

Responsive Advertisement