ದೆಹಲಿ : ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತನ್ನನ್ನು ಪರಿಗಣಿಸಬೇಕೆಂದು ಸಂಸದ ರಾಜಮೋಹನ್ ಉಣ್ಣಿತ್ತಾನ್ ಬೇಡಿಕೆ ಇರಿಸಿರುವುದಾಗಿ ತಿಳಿದುಬಂದಿದೆ. ಅವರು ತಮ್ಮ ಈ ಬೇಡಿಕೆಯನ್ನು ಹೈಕಮಾಂಡ್ ನಾಯಕತ್ವಕ್ಕೆ ತಿಳಿಸಿರುವುದಾಗಿ ತಿಳಿದು ಬಂದಿದೆ. ಪಕ್ಷದಲ್ಲಿನ ಜಾತಿ ಸಮೀಕರಣಗಳನ್ನು ಮಾತ್ರ ನೋಡಿ ಅಧ್ಯಕ್ಷರನ್ನು ನಿರ್ಧರಿಸುವ ಪ್ರಸ್ತುತ ಪ್ರವೃತ್ತಿಯನ್ನು ಕೊನೆಗೊಳಿಸುವಂತೆ ಉಣ್ಣಿತ್ತಾನ್ ಹೈಕಮಾಂಡ್ ಅನ್ನು ಅಗ್ರಹಿಸಿದ್ದಾರೆ. ಪಕ್ಷದಲ್ಲಿನ ಅರ್ಹತೆ, ಮತ್ತು ಕೆಲಸದ ಅನುಭವ ಮಾತ್ರ ಅಧ್ಯಕ್ಷರನ್ನು ಆಯ್ಕೆ ಮಾಡುವ ಏಕೈಕ ಮುಖ್ಯ ಮಾನದಂಡವಾಗಿರಬೇಕು. 1978 ರಿಂದ ತಮ್ಮ ಕಾರ್ಯ ಚಟುವಟಿಕೆಯನ್ನು ಹೈಕಮಾಂಡ್ ಪರಿಗಣಿಸಬೇಕೆಂದು ರಾಜಮೋಹನ್ ಉಣ್ಣಿತ್ತಾನ್ ವಿಶೇಷವಾಗಿ ಹೈಕಮಾಂಡ್ ಗೆ ಸೂಚಿಸಿದ್ದಾರೆ. ಸಂಘಟನಾ ಮುಖ್ಯಸ್ಥರಿಗೆ ಪದಾಧಿಕಾರಿಗಳನ್ನು ನೇಮಿಸುವಾಗ ಜಾತಿ-ಸಮುದಾಯ ಸಮೀಕರಣಗಳಿಗೆ ಆದ್ಯತೆ ನೀಡುವುದರಿಂದ ಪಕ್ಷದ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಉಣ್ಣಿತ್ತಾನ್ ಅವರ ನಿಲುವು. ಗುಂಪು ಹಿತಾಸಕ್ತಿ ಮತ್ತು ಸಮುದಾಯ ಸಮೀಕರಣಗಳನ್ನು ಮೀರಿ ಕೆಲಸ ಮಾಡುವ ನಾಯಕರನ್ನು ಮುನ್ನೆಲೆಗೆ ತರಲು ಹೈಕಮಾಂಡ್ ಸಿದ್ಧವಾಗಬೇಕೆಂದು ಅವರು ಒತ್ತಾಯಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಸಂಬಂಧಿಸಿದಂತೆ ಕೊಟ್ಟಾಯಂ ಡಿಸಿಸಿ ಕಚೇರಿಯ ಮುಂದೆ ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬ ಬೇಡಿಕೆಯೊಂದಿಗೆ ಫ್ಲಕ್ಸ್ ಬೋರ್ಡ್‌ಗಳು ಕಾಣಿಸಿಕೊಂಡಿವೆ. ಸಂಸದರು ಮತ್ತು ಶಾಸಕರು ಕ್ಷೇತ್ರವನ್ನು ನೋಡಿಕೊಳ್ಳಬೇಕು ಮತ್ತು ಕೆಪಿಸಿಸಿಗೆ ಪೂರ್ಣಾವಧಿಯ ಅಧ್ಯಕ್ಷರಾಗುವವರನ್ನು ಮಾತ್ರ ನೇಮಕಗೊಳಿಸಬೇಕೆಂದು ಬೋರ್ಡ್‌ನಲ್ಲಿ ಬರೆಯಲಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೆಲವು ಸಂಸದರು ಮತ್ತು ಶಾಸಕರನ್ನು ಪರಿಗಣಿಸುತ್ತಿರುವ ವಿಚಾರ ಪ್ರಚಾರಗೊಳ್ಳುತ್ತಿದ್ದಂತೆ ಈ ಫ್ಲಕ್ಸ್ ಬೋರ್ಡ್ ಕಾಣಿಸಿಕೊಂಡಿದೆ. ಕೊಟ್ಟಾಯಂನಲ್ಲಿ ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಲ್ಲಿಯೂ ಇಂತಹ ಬೋರ್ಡ್ ಕಾಣಿಸಿಕೊಂಡಿದೆ. ಕೋಡಿಕುನ್ನಿಲ್ ಸುರೇಶ್, ಬೆನ್ನಿ ಬೆಹನನ್, ಆಂಟ್ರೋ ಆಂಟನಿ, ಶಫಿ ಪರಂಬಿಲ್ ಮೊದಲಾದ ಅನೇಕರು ಸಂಸದರು ರಾಜಮೋಹನ್ ಅವರನ್ನು ಈ ಹುದ್ದೆಗೆ ಪರಿಗಣಿಸಬೇಕೆಂದು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ..

0 Comments