Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಅಂಧೇರಿ ಕರ್ನಾಟಕ ಸಂಘದ ನಿರೂಪಣಾ ಕೌಸ್ತುಭ ಪ್ರಶಸ್ತಿಗೆ ರವಿ ನಾಯ್ಕಾಪು ಆಯ್ಕೆ : ಜೂ.28 ಕ್ಕೆ ಮುಂಬಯಿಯಲ್ಲಿ‌‌ ಪ್ರಶಸ್ತಿ ಪ್ರದಾನ

 

ಕಾಸರಗೋಡು : ನಿರೂಪಕ, ಸಂಘಟಕ, ಲೇಖಕ ರವಿ ನಾಯ್ಕಾಪು ಅವರಿಗೆ 'ನಿರೂಪಣಾ ಕೌಸ್ತುಭ'  ಪ್ರಶಸ್ತಿಯ ಗರಿ. ನಿರೂಪಣಾ ಕ್ಷೇತ್ರದ ಅವರ ಬಹುಮುಖ ಸಾಧನೆ, ಸಾಮರ್ಥ್ಯವನ್ನು ಪರಿಗಣಿಸಿ ಮುಂಬಯಿಯ ಅಂಧೇರಿ ಕರ್ನಾಟಕ ಸಂಘವು ಈ ಪ್ರಶಸ್ತಿ ಘೋಷಿಸಿದೆ. ಈ ತಿಂಗಳ 28 ರಂದು ಅಂಧೇರಿ ಕರ್ನಾಟಕ ಸಂಘದ ಆಶ್ರಯದಲ್ಲಿ ಮುಂಬಯಿಯ ಕುರ್ಲಾ ಬಂಟರ ಭವನದಲ್ಲಿ ಜರಗಲಿರುವ ಹೊರನಾಡ ಕನ್ನಡ ಸಂಸ್ಕೃತಿ  ಸಂಭ್ರಮ 2026 ಕಾರ್ಯಕ್ರಮದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡುವುದಾಗಿ ಸಂಘದ ಸಂಸ್ಥಾಪಕರಾಗಿರುವ ಕೃಷ್ಣ.ಬಿ. ಶೆಟ್ಟಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪತ್ರಕರ್ತ, ಲೇಖಕ, ಸಂಘಟಕ, ಕನ್ನಡ ಕಾರ್ಯಕ್ರಮಗಳ ನಿರೂಪಕರಾಗಿರುವ ರವಿ ನಾಯ್ಕಾಪು ಅವರು ದಾನಗಂಗೆ, ಸ್ನೇಹಗಂಗೆ, ಗಾನಗಂಗೆ, ಸಾವಿರದ ಸಾಧಕ, ಸಮಾಜ ಸಂಪದ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಈ ಪೈಕಿ 'ಸ್ನೇಹಗಂಗೆ' ಕೃತಿಯು ಈಗಾಗಲೇ ಎರಡು ಮುದ್ರಣಗಳನ್ನು ಕಂಡಿದ್ದು, ಕೃತಿಯ ಸಂಕ್ಷಿಪ್ತ ರೂಪವು ಮಂಗಳೂರು ವಿಶ್ವವಿದ್ಯಾನಿಲಯದ ಬಿಸಿಎ ನಾಲ್ಕನೇ ಸೆಮಿಸ್ಟರ್ ಕನ್ನಡ ಪಠ್ಯ ಪುಸ್ತಕದಲ್ಲಿ ಒಳಪಟ್ಟಿರುವುದು ಗಮನೀಯ.

ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಗಡಿನಾಡ ಘಟಕದ ಪ್ರಧಾನ ಕಾರ್ಯದರ್ಶಿ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಹಿತ ಅನೇಕ ಸಾಮಾಜಿಕ, ಸಾಹಿತ್ಯಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ.

Post a Comment

0 Comments


ಜಾಹೀರಾತು

Responsive Advertisement