ಕಾಸರಗೋಡು : ನಗರದ ಬಿ. ಇ. ಎಮ್ ಪ್ರೌಢ ಶಾಲಾ ಅಧ್ಯಾಪಕ, ವಿದ್ಯಾರ್ಥಿಗಳಿಂದ ವಾಚನ ವಾರಾಚಾರಣೆಯ ಪ್ರಯುಕ್ತ 'ಜೀವನದಲ್ಲಿ ಪುಸ್ತಕದ ಪ್ರಸಕ್ತಿ' ಎಂಬ ಕಾರ್ಯಕ್ರಮದ ಬಾಗವಾಗಿ ವಿಚಾರ ಗೋಷ್ಠಿ ನಡೆಯಿತು. ನಗರದ ನುಳ್ಳಿಪ್ಪಾಡಿಯ ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ಮುಖ್ಯ ಅತಿಥಿಯಾಗಿ ಆಗಮಿಸಿ ವಿಚಾರ ಮಂಡನೆ ಮಾಡಿದರು. ವಿದ್ಯಾಭ್ಯಾಸಕ್ಕಾಗಿ ಓದುವ ಪುಸ್ತಕಗಳೊಂದಿಗೆ, ಶ್ರೇಷ್ಠ ಜ್ಞಾನ ಪ್ರಾಪ್ತಿಗಾಗಿ ವಿದ್ವತ್ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪ್ರತಿ ಮನೆಯಲ್ಲಿ ಪುಟ್ಟ ಗ್ರಂಥಾಲಯವನ್ನು ಸ್ಥಾಪಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು. ಬಿ. ಇ. ಎಮ್ ಪ್ರೌಢ ಶಾಲಾ ಪ್ರಾಂಶುಪಾಲ ಕೆ. ಪಿ. ರಾಜೇಶ್ಚಂದ್ರ ಅಧ್ಯಕ್ಷತೆ ವಹಿಸಿದರು. ಪ್ರಾಧ್ಯಾಪಕ ಷಾಜಿ ಕೆ. ಎ. ಸ್ವಾಗತಿಸಿ, ಸ್ಟಾಫ್ ಸೆಕ್ರೆಟರಿ ವೀಣಾ ಎಚ್. ಕಾರ್ಯಕ್ರಮ ನಿರ್ವಹಣೆಗೈದರು.
ಈ ಕಾರ್ಯಕ್ರಮದಲ್ಲಿ ಕನ್ನಡ ಭವನ ಗ್ರಂಥಾಲಯ ವತಿಯಿಂದ, ಡಾ. ವಾಮನ್ ರಾವ್ ಬೇಕಲ್ ಸುಮಾರು 3000ಮೊತ್ತದ ಪುಸ್ತಕಗಳನ್ನು ಬಿ. ಇ. ಎಮ್. ಶಾಲಾ ಗ್ರಂಥಾಲಯಕ್ಕೆ ನೀಡಿದರು. ಹಾಗೂ ಶಾಲಾ ವಿದ್ಯಾರ್ಥಿಗಳನ್ನು ಒಂದು ದಿನದ 'ಪುಸ್ತಕಗಳೊಂದಿಗೆ ಸಂವಾದ' ಕಾರ್ಯಕ್ರಮಕ್ಕೆ ಕನ್ನಡ ಭವನ ಗ್ರಂಥಾಲಯಕ್ಕೆ ಆಹ್ವಾನಿಸಿದರು. ಶಾಲಾ ವಿದ್ಯಾರ್ಥಿ ನಾಯಕಿ ಅಂಜೆಲ್ ಮೇರಿ ಸಾಜನ್ ಧನ್ಯವಾದವಿತ್ತರು.

0 Comments