Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕುರಡ್ಕದಲ್ಲಿ 'ಶ್ರೀ ದುರ್ಗಾ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್' ನಿಂದ ಅಭಿನಂದನೆ, ಪ್ರತಿಭಾ ಪುರಸ್ಕಾರ ಮತ್ತು ಉಚಿತ ಪುಸ್ತಕ ವಿತರಣೆ

 

ಪೆರ್ಲ : ಶ್ರೀ ದುರ್ಗಾ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಕುರಡ್ಕ ಇದರ ವತಿಯಿಂದ ಸಾಧಕರ ಸನ್ಮಾನ ಮತ್ತು ಎಲ್ ಎಸ್ ಎಸ್, ಎಸ್ ಎಸ್ ಎಲ್ ಸಿ. ಹಾಗೂ ಪ್ಲಸ್ ಟು ವಿಭಾಗಗಳಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವು ಬಜಕೂಡ್ಲು ಶ್ರೀ ದುರ್ಗಾಪರಮೇಶ್ವರಿ ಮಂದಿರದ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷ ಗಣೇಶ್ ಕುಮಾರ್ ಮಾಸ್ಟರ್ ಖಂಡಿಗೆ ವಹಿಸಿದರು. ಶ್ರೀ ದುರ್ಗಾಪರಮೇಶ್ವರಿ ಮಂದಿರದ ಪ್ರಧಾನ ಅರ್ಚಕ ಐತ್ತು ನಾಯ್ಕ ಬಜಕೂಡ್ಲು ಅವರು ಉದ್ಘಾಟಿಸಿ, ಶುಭ ಹಾರೈಸಿದರು. ಜಿ ಹೆಚ್ ಎಸ್ ಎಸ್ ಪೈವಳಿಕೆ ಯ ಜಯಕುಮಾರ್ಜಿ ಎಚ್ ಎಸ್ ಎಸ್ ಪಡ್ರೆಯ ಅಧ್ಯಾಪಕಿ    ಉಷಾ ಕುಮಾರಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಮುಖ್ಯ ಅತಿಥಿಯಾಗಿ ವಾರ್ಡ್ ಸದಸ್ಯೆ ಸೌಧಾಬಿ  ಹನೀಫ್ ನಡುಬೈಲ್ ಹಾಗೂ ಜನಾರ್ದನ ಮಾಸ್ಟರ್ ಭಾಗವಹಿಸಿದ್ದರು. 

ಈ ಸಂದರ್ಭದಲ್ಲಿ ಸೆಕೆಂಡ್ ಡಾನ್ ಬ್ಲಾಕ್ ಬೆಲ್ಟ್ ಪದವಿ ಪಡೆದ ಕಾಸರಗೋಡಿನ ಕರಾಟೆ ಪಟು ಸೌಮ್ಯ ಚೆoಬ್ರಕಾನ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಹರ್ಷಿತ, ಸೌಮ್ಯ, ಮೇಘಶ್ರೀ, ಪ್ರಸಿದ  ಪ್ರಾರ್ಥನೆ ಹಾಡಿದರು. ರಮೇಶ್ ಕುರಡ್ಕ ಸ್ವಾಗತಿಸಿ, ವಂದಿಸಿದರು.

Post a Comment

0 Comments


ಜಾಹೀರಾತು

Responsive Advertisement