ಕುಂಬಳೆ : ಸ್ವಾದಿಷ್ಟ ಭರಿತ ಆಹಾರ ಲೋಕಕ್ಕೆ ಪ್ರಸಾದ್ ಸ್ಟೀಮ್ ಪುಟ್ಟು ಪೌಡರ್ ನ್ನು ಮಾರುಕಟ್ಟೆ ಗೆ ಬಿಡುಗಡೆ ಮಾಡಲಾಗಿದೆ. ಕುಂಬಳೆ ಸಮೀಪದ ನಾಯ್ಕಾಪಿನಲ್ಲಿರುವ ಭಗವತಿ ಪ್ರಸಾದ್ ರೈಸ್ ಪ್ಲೋರ್ ಆಯಿಲ್ ಮಿಲ್ ನಲ್ಲಿ ತಯಾರುಗೊಳ್ಳುತ್ತಿರುವ ಪ್ರಸಾದ್ ಸ್ಟೀಮ್ ಪುಟ್ಟು ಪೌಡರ್ ನ್ನು ಗುರುವಾರ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ನಾಯ್ಕಾಪಿನ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಗವತಿ ಪ್ರಸಾದ್ ಸಂಸ್ಥೆಯ ಗೋವಿಂದ ನಾಯಕ್ - ವನಿತ ನಾಯಕ್ ದಂಪತಿಗಳು ದೀಪ ಪ್ರಜ್ವಲನೆಗೈದರು. ಸಾಯಿ ಮಂದಿರದ ಅರ್ಚಕ ಗುರುದತ್ ನಾಯಕ್ ಉತ್ಪನ್ನ ಪಡೆದುಕೊಳ್ಳುವ ಮೂಲಕ ಬಿಡುಗಡೆಗೊಳಿಸಲಾಯಿತು. ಭಾವನ ಪ್ರಾರ್ಥನೆ ಹಾಡಿದರು. ಸಂಸ್ಥೆಯ ಶ್ರೀಲಕ್ಷ್ಮಿ ಸ್ವಾಗತಿಸಿ, ಪ್ರಸಾದ್ ವಂದಿಸಿದರು. ಅಶೋಕ್ ಮಾಸ್ತರ್ ಬಾಡೂರು ನಿರೂಪಿಸಿದರು.

0 Comments