Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಾರಿನಲ್ಲಿ ದನಗಳ ಕದ್ದೊಯ್ದ ಕಳ್ಳರು : ದೃಶ್ಯ ಸಿಸಿಟಿವಿಯಲ್ಲಿ ಸೆರೆ


ಬದಿಯಡ್ಕ : ಕಾರಿನಲ್ಲಿ ಬಂದ ಜನರ ಗುಂಪೊಂದು ಅಂಗಡಿಯ ವರಾಂಡದಲ್ಲಿ ಮಲಗಿದ್ದ ಹಸುಗಳನ್ನು ಕದ್ದೊಯ್ದ ಪ್ರಕರಣ ಕನ್ಯಪ್ಪಾಡಿಯಲ್ಲಿ ನಡೆದಿದೆ. ಕನ್ಯಪ್ಪಾಡಿಯ ಕೆ.ಎಂ. ಮುಹಮ್ಮದ್ ಕುಂಞಿ(45) ಎಂಬವರ ಸುಮಾರು 30,000 ರೂ. ಮೌಲ್ಯದ ಹಸುಗಳನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಅವರ ದೂರಿನ ಮೇರೆಗೆ ಬದಿಯಡ್ಕ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಿನ್ನೆ ಬೆಳಗಿನ ಜಾವ 1:30 ಕ್ಕೆ ಈ ಘಟನೆ ನಡೆದಿದೆ. 

ಸಾಮಾನ್ಯವಾಗಿ ಹಸುಗಳು ಮನೆಯ ಮುಂಭಾಗದ ಅಂಗಡಿ ವರಾಂಡದಲ್ಲಿ ಮಲಗಿರುತ್ತವೆ. ಇದನ್ನು ಅರಿತ ಗುಂಪು, ಸಿಲೋ ಕಾರಿನಲ್ಲಿ ಹಸುಗಳನ್ನು ಕದ್ದಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Post a Comment

0 Comments


ಜಾಹೀರಾತು

Responsive Advertisement