Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮುಳ್ಳೇರಿಯ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ

 

ಮುಳ್ಳೇರಿಯ : ಲಯನ್ಸ್ ಕ್ಲಬ್ ಆಫ್ ಮುಳ್ಳೇರಿಯ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ಪ್ರಿನ್ಸಿಪಲ್ ಕಾರ್ಯದರ್ಶಿ ವಿ. ವೇಣುಗೋಪಾಲ್ ಮುಖ್ಯ ಅತಿಥಿಯಾಗಿದ್ದರು. ಕೆ. ರಾಜಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಪಿ.ವಿ. ಮಧುಸೂದನನ್, ವಲಯ ಅಧ್ಯಕ್ಷ ಎಂ.ಎ. ನಾಸರ್, ವಿದ್ಯಾನಗರ ಲಯನ್ಸ್ ಕ್ಲಬ್ ಅಧ್ಯಕ್ಷ ವಿಜಯಕುಮಾರ್, ಕೆ. ಶೇಖರನ್ ನಾಯರ್, ಎ. ಪ್ರಭಾಕರನ್ ನಾಯರ್, ಶಾಫಿ ಚೂರಿಪಳ್ಳಂ, ಶಿವಲಾಲ್ ಯಾದವ್ ಹಾಗೂ ಡಾ. ಕೆ. ದೀಪಾಲಕ್ಷ್ಮಿ ಮಾತನಾಡಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

2026–27ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಟಿ.ಎನ್. ಮೋಹನನ್ (ಅಧ್ಯಕ್ಷ), ಇ. ವೇಣುಗೋಪಾಲನ್ (ಕಾರ್ಯದರ್ಶಿ), ಎಂ. ಮಾಧವನ್ ನಾಯರ್ (ಖಜಾಂಚಿ), ಮೋಹನನ್ ಕರಿಚ್ಚೇರಿ, ಕೆ.ಎ. ಚಂದನ್ ಹಾಗೂ ಎಂ.ವಿ. ಅನಿಲ್ ಕುಮಾರ್ (ಉಪಾಧ್ಯಕ್ಷರು), ಮಿನಿ ಪಿ. ನಾಯರ್ (ಜತೆ ಕಾರ್ಯದರ್ಶಿ) ಪದಗ್ರಹಣ ಮಾಡಿದರು.

Post a Comment

0 Comments

ಜಾಹೀರಾತು

Responsive Advertisement