ಮಂಜೇಶ್ವರ : ಕುಲಾಲ ವೇದಿಕೆ ಮಂಜೇಶ್ವರದಿಂದ ಕುಲಾಲ ಸಂಘ ಹೊಸಬೆಟ್ಟು ಮಂಜೇಶ್ವರ ಇದರ ವಠಾರದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಜರಗಿತು. ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯೆ ಬೇಬಿಲತಾ ಯಾದವರವರು ಧ್ವಜಾರೋಹಣಗೈದರು.
ಕೇರಳ ಹೈಕೋರ್ಟ್ ಡೆಪ್ಯುಟಿ ರಿಜಿಸ್ಟರ್ ದಿನೇಶ ಕೊಡಂಗೆ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಗಣೇಶೋತ್ಸವ ಸಮಿತಿ ಅಧ್ಯಕ್ಷ ಯಾದವ ಬಡಾಜೆ, ಶಿವಾನಂದ ಹೊಸಬೆಟ್ಟು ಹಾಗೂ ಕುಲಾಲ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈಶ್ವರ ಮಾಸ್ತರ್ ಸ್ವಾಗತಿಸಿ, ಕಿಶನ್ ಕಣ್ವತೀರ್ಥ ವಂದಿಸಿದರು.

0 Comments