ಬದಿಯಡ್ಕ: ಎಲೈಟ್ ಅಕಾಡೆಮಿ ಬದಿಯಡ್ಕ ಹಾಗೂ ಕೇರಳ ಸ್ಟೇಟ್ ರುಟ್ರೋನಿಕ್ಸ್ ಕೇಂದ್ರದ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಬದಿಯಡ್ಕ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅವಿನಾಶ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಲೈಟ್ ಅಕಾಡೆಮಿಯ ಪ್ರಾಂಶುಪಾಲರಾದ ಕಿಶೋರ್ ವಹಿಸಿದ್ದರು.
ಸ್ವಾತಂತ್ರ್ಯದ ಮಹತ್ವ, ದೇಶದ ಏಕತೆ ಹಾಗೂ ಯುವಜನರ ಜವಾಬ್ದಾರಿಯ ಕುರಿತು ಮುಖ್ಯ ಅತಿಥಿಗಳು ಸಂದೇಶ ನೀಡಿದರು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇಶಭಕ್ತಿಯ ವಾತಾವರಣವನ್ನು ನಿರ್ಮಿಸಿದರು. ಅದ್ಯಾಪಿಕೆ ಗ್ರೀಷ್ಮ ಸ್ವಾಗತಿಸಿ, ಸ್ಮಿತೇಶ ವಂದಿಸಿದರು

0 Comments