Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಓಣಂ ಕಾರ್ಯಕ್ರಮಗಳಿಗೆ ಕಾಪಿರೈಟ್ ನಿಯಮ; ಹಾಡು ಹಾಕುವ ಮುನ್ನ ಎಚ್ಚರ

ಕೊಚ್ಚಿ : ಓಣಂ ಆಚರಣೆಯಲ್ಲಿ ಕಾಪಿರೈಟ್ ಹೊಂದಿರುವ ಹಾಡುಗಳನ್ನು ಸಾರ್ವಜನಿಕವಾಗಿ ಬಳಸುವ ಮುನ್ನ ಅಗತ್ಯ ಅನುಮತಿ ಪಡೆಯಬೇಕು ಎಂದು ಸಂಗೀತ ಹಕ್ಕು ನಿರ್ವಹಣಾ ಸಂಸ್ಥೆ ನೊವೊಕ್ಸ್ ಕಮ್ಯುನಿಕೇಷನ್ಸ್ ಎಚ್ಚರಿಕೆ ನೀಡಿದೆ. ಅನುಮತಿ ಇಲ್ಲದೆ ಹಾಡುಗಳನ್ನು ಬಳಸಿದರೆ ಕಾನೂನು ಕ್ರಮ ಎದುರಿಸುವ ಸಾಧ್ಯತೆಯಿದೆ.

1957ರ ಕಾಪಿರೈಟ್ ಕಾಯ್ದೆಯ ಪ್ರಕಾರ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಪಿರೈಟ್ ಹೊಂದಿರುವ ಸಂಗೀತವನ್ನು ಪ್ರಸಾರ ಮಾಡಲು ಸಂಬಂಧಪಟ್ಟ ಕಾಪಿರೈಟ್ ಮಾಲೀಕರಿಂದ ಅಥವಾ ಅಧಿಕೃತ ಪ್ರತಿನಿಧಿಗಳಿಂದ ಪೂರ್ವಾನುಮತಿ ಪಡೆಯುವುದು ಅಗತ್ಯವಾಗಿದೆ. ಓಣಂ ಕಾರ್ಯಕ್ರಮಗಳಲ್ಲಿ ರೆಕಾರ್ಡ್ ಮಾಡಲಾದ ಹಾಡುಗಳನ್ನು ಹಾಕುವುದು, ಡಿಜೆ ಕಾರ್ಯಕ್ರಮ ನಡೆಸುವುದು, ಕಾಪಿರೈಟ್ ಹಾಡುಗಳನ್ನು ಒಳಗೊಂಡ ಲೈವ್ ಸಂಗೀತ ಅಥವಾ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕೂ ಈ ನಿಯಮ ಅನ್ವಯಿಸುತ್ತದೆ.

ರಿಗಮ, ಯಶ್ ರಾಜ್ ಫಿಲ್ಮ್ಸ್, ಟಿಪ್ಸ್ ಮ್ಯೂಸಿಕ್, ಝೀ ಮ್ಯೂಸಿಕ್, ಶೆಮಾರೂ ಸೇರಿದಂತೆ ಹಲವು ಮ್ಯೂಸಿಕ್ ಲೇಬಲ್‌ಗಳ ಹಾಗೂ ಕೆಲವು ಕಲಾವಿದರ ಸಾರ್ವಜನಿಕ ಪ್ರದರ್ಶನ ಹಕ್ಕುಗಳನ್ನು ನೊವೊಕ್ಸ್ ಕಮ್ಯುನಿಕೇಷನ್ಸ್ ನಿರ್ವಹಿಸುತ್ತಿದೆ ಎಂದು ಸಂಸ್ಥೆಯ ಕೇರಳ ಪ್ರತಿನಿಧಿ ಎಂ. ಉಣ್ಣಿಕೃಷ್ಣನ್ ತಿಳಿಸಿದ್ದಾರೆ. ಆದ್ದರಿಂದ ಓಣಂ ಕಾರ್ಯಕ್ರಮ ಆಯೋಜಕರು ನಿಗದಿತ ಲೈಸೆನ್ಸ್ ಶುಲ್ಕ ಪಾವತಿಸಿ ಅಗತ್ಯ ಅನುಮತಿ ಅಥವಾ ನ್ಸಿ ಪಡೆದುಕೊಂಡ ಬಳಿಕವೇ ಕಾಪಿರೈಟ್ ಹೊಂದಿರುವ ಹಾಡುಗಳನ್ನು ಸಾರ್ವಜನಿಕವಾಗಿ ಬಳಸಬೇಕು ಎಂದು ಸೂಚಿಸಲಾಗಿದೆ.

Post a Comment

0 Comments

ಜಾಹೀರಾತು

Responsive Advertisement