ಕಾಸರಗೋಡು : ಪ್ಲಾಟಿನಂ ಜೂಬಿಲಿಯ ಅಂಗವಾಗಿ ಬಂದಡ್ಕ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕೃಷಿಕರ ದಿನಾಚರಣೆಯನ್ನು ಆಚರಿಸಲಾಯಿತು. ಕೃಷಿಕ ಮಹಿಳೆ ಹಾಗೂ ವ್ಲಾಗರ್ ಆಗಿರುವ ಶೀನಮೋಲ್ ಪಿ. ಎಸ್. ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕೃಷಿ ಕ್ಷೇತ್ರದಲ್ಲಿ ವೈವಿಧ್ಯಮಯ ಸಾಧನೆ ಮಾಡಿದ ಕೃಷಿಕರಾದ ಕರುಣಾಕರನ್, ವಿಸ್ಮಯ, ಸಿ. ಮಾಧವನ್ ನಾಯರ್, ಕೆ. ರಾಘವನ್ ಬೇತ್ತಲಂ, ಎ. ರಾಧಾಕೃಷ್ಣನ್ ನಾಯರ್ ಮತ್ತು ಶಾಲೆಯ ಬಾಲ ಕೃಷಿಕ ರೂಪಿತ್ ಎಂ. ಎಸ್. ಅವರನ್ನು ಸನ್ಮಾನಿಸಲಾಯಿತು.
ಕಾರ್ಯಾಧ್ಯಕ್ಷ ಸುರೇಶ್ ಪಿ. ವಿ. ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸಮಿತಿ ಅಧ್ಯಕ್ಷರಾದ ಶೋಭನಾ ಬಾಲಚಂದ್ರನ್, ಜೋಸ್ ಪಾರತ್ತಟ್ಟೇಲ್, ಬಲರಾಮನ್ ನಂಬಿಯಾರ್, ರಾಧಾಕೃಷ್ಣನ್ ನಂಬಿಯಾರ್, ಕೃಷ್ಣನ್ ಮೇಲತ್, ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ ಸಾವಿತ್ರಿ, ಜಾನ್ ಕೆ. ಎ., ಕಾರ್ಯಕ್ರಮ ಸಮಿತಿ ಸಂಚಾಲಕಿ ವಸಂತಕುಮಾರಿ ಟಿ. ಕೆ. ಮತ್ತು ರಾಧಾಕೃಷ್ಣನ್ ಎ. ಕೆ. ಮಾತನಾಡಿದರು.
ಈ ಸಂದರ್ಭದಲ್ಲಿ ಕರುಣಾಕರನ್ ವಿಸ್ಮಯ, ಸಿ. ಮಾಧವನ್ ನಾಯರ್, ರಾಘವನ್ ಬೇತ್ತಲಂ ಹಾಗೂ ರಾಧಾಕೃಷ್ಣನ್ ತಮ್ಮ ಕೃಷಿ ಅನುಭವಗಳನ್ನು ಹಂಚಿಕೊಂಡರು. ಶಾಲಾ ಪ್ರಾಂಶುಪಾಲೆ ಹಾಗೂ ಜನರಲ್ ಸಂಚಾಲಕಿ ರೇಖಾ ದಾಸ್ ಕೆ.ಪಿ. ಸ್ವಾಗತಿಸಿ, ಸಿಬ್ಬಂದಿ ಕಾರ್ಯದರ್ಶಿ ಜ್ಯೋತಿಲಕ್ಷ್ಮಿ ಕೆ. ವಂದಿಸಿದರು.

.png)
0 Comments