ಮಂಜೇಶ್ವರ : 'ರಾಯರ ಭಕ್ತರು ಮಂಜೇಶ್ವರ' ವತಿಯಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355 ನೇ ಆರಾಧನಾ ಮಹೋತ್ಸವ ಆಚರಣೆಯು ಆಗಸ್ಟ್ 30 ರಂದು ಭಾನುವಾರ ವಿವಿಧ, ವೈದಿಕ ಕಾರ್ಯಕ್ರಮಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ 66 ಮಂಜೇಶ್ವರ ಹೊಸಬೆಟ್ಟು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ಜರುಗಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಇಂದು ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವೃಂದಾವನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಮಂತ್ರಾಲಯದ ಮಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಬಿಡುಗಡೆಗೊಂಡಿತು. ಬಳಿಕ ಗುರುವರ್ಯರು ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಆಶೀರ್ವಾದದ ಫಲ ಮಂತ್ರಾಕ್ಷತೆಯನ್ನು ನೀಡಿ ಹರಸಿದರು. ಈ ವೇಳೆ ರಾಯರ ಭಕ್ತರು ಮಂಜೇಶ್ವರದ ಸ್ಥಾಪಕರಾದ ಪತ್ರಕರ್ತ ರತನ್ ಕುಮಾರ್ ಹೊಸಂಗಡಿ, ರಾಜೇಶ್ ಕಡಂಬಾರು, ಪ್ರಸನ್ನ ಆಚಾರ್ಯ ಕಾಸರಗೋಡು, ಶ್ರೀಪಾದ ಆಚಾರ್ಯ ಮಂತ್ರಾಲಯ, ಶ್ರೀನಿಧಿ ಮಂತ್ರಾಲಯ ಉಪಸ್ಥಿತರಿದ್ದರು. ಅಪರೋಕ್ಷ ಜ್ಞಾನಿಗಳು, ಕಲಿಯುಗದ ಕಾಮಧೇನುಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳವರು ಮಂತ್ರಾಲಯದಲ್ಲಿ ವೃಂದಾವನಸ್ಥರಾಗಿ ಆಗಸ್ಟ್ 30 ಕ್ಕೆ ಭರ್ತಿ 355 ವರ್ಷಗಳು ತುಂಬುತ್ತಿವೆ. ಮಂತ್ರಾಲಯ ಸೇರಿದಂತೆ ದೇಶ ವಿದೇಶಗಳಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಗಳಲ್ಲಿ ಆರಾಧನಾ ಮಹೋತ್ಸವ ವಿವಿಧ ಪೂಜೆ ಪುನಸ್ಕಾರ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ಜರಗಲಿವೆ.
ಅದೇ ರೀತಿ ಮಂಜೇಶ್ವರದ ಹೊಸಬೆಟ್ಟು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಭಾಭವನದಲ್ಲಿ ರಾಯರ ಭಕ್ತರ ವತಿಯಿಂದ ನಡೆಯುವ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಅಗಸ್ಟ್ 30 ರಂದು ಭಾನುವಾರ ಬೆಳಗ್ಗೆ 7.00 ರಿಂದ ಸ್ಥಳ ಶುದ್ಧಿ, ಪ್ರಾರ್ಥನೆ, ಶ್ರೀ ಗುರುರಾಯರ ವಿಶೇಷ ಪಾದಪೂಜೆ ಬೆಳಗ್ಗೆ 8.30 ರ ಶುಭಲಗ್ನ ಸುಮೂರ್ಹತದಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ, ಲಘು ಉಪಾಹಾರ. ಬಳಿಕ ನಡೆಯುವ ಸರಳ ಸಮಾರಂಭದಲ್ಲಿ ಧಾರ್ಮಿಕ ಸಾಮಾಜಿಕ ಮುಂದಾಳು ಕೃಷ್ಣ ಶಿವಕೃಪಾ ಕುಂಜತ್ತೂರು ಧಾರ್ಮಿಕ ಪ್ರವಚನ ನೀಡಲಿರುವರು. ಶಶಿಧರ ಶೆಟ್ಟಿ ಜಮ್ಮದ ಮನೆ (ಸುರತ್ಕಲ್), ಆಡಳಿತ ಮೊಕ್ತೇಸರರು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ ಜಮ್ಮದಮನೆ ಹೊಸಬೆಟ್ಟು, ಮಂಜೇಶ್ವರ, ಅಶ್ವಿನಿ ಎಂ.ಎಲ್ (ಅಧ್ಯಕ್ಷೆ, ಬಿ.ಜೆ.ಪಿ ಕಾಸರಗೋಡು ಜಿಲ್ಲಾ ಸಮಿತಿ), ಸುಂದರಿ ಆರ್ ಶೆಟ್ಟಿ (ಮಾಜಿ ಅಧ್ಯಕ್ಷೆ, ಮೀಂಜ ಗ್ರಾಮ ಪಂಚಾಯತು, ಕಮಲಾಕ್ಷಿ ಕೆ.ಪಾವೂರು. (ಉಪಾಧ್ಯಕ್ಷೆ, ಮಂಜೇಶ್ವರ ಬ್ಲಾಕ್ ಪಂಚಾಯತ್.), ಹೈಮೇಶ್ ಬಿ.ಎಂ (ಗೌರವಾಧ್ಯಕ್ಷರು, ಸಾರ್ವಜನಿಕ ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿ.), ಯಾದವ ಬಡಾಜೆ (ಅಧ್ಯಕ್ಷರು, ಸಾರ್ವಜನಿಕ ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿ.), ನ್ಯಾಯವಾದಿ ನವೀನ್ ರಾಜ್ ಕೆ. ಜೆ. (ಅಧ್ಯಕ್ಷರು, ಶ್ರೀ ಅಯ್ಯಪ್ಪ ಕ್ಷೇತ್ರ ಹೊಸಂಗಡಿ.), ಉದಯ ಪಾವಳ (ಗುರುಸ್ವಾಮಿ, ಶ್ರೀ ಅಯ್ಯಪ್ಪ ಕ್ಷೇತ್ರ ಹೊಸಂಗಡಿ.), ಬಿ.ಎಂ ಯದುನಂದನ ಆಚಾರ್ಯ ಕಡಂಬಾರು (ಅಧ್ಯಕ್ಷರು, ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನ, ಬಂಗ್ರಮಂಜೇಶ್ವರ.), ರಾಹುಲ್ ಕಾಮತ್ ಮಂಜೇಶ್ವರ (ಮೆನೇಜರ್, ಶ್ರೀಮತ್ ಅನಂತೇಶ್ವರ ದೇವಸ್ಥಾನ, ಮಂಜೇಶ್ವರ.), ಗಣೇಶ್ ಸಾಲ್ಯಾನ್ (ಅಧ್ಯಕ್ಷರು, ಶ್ರೀ ಮಲರಾಯ ದೈವಸ್ಥಾನ, ಬಂಗ್ರಮಂಜೇಶ್ವರ.), ಸುದರ್ಶನ ಕುಮಾರ್ ಜೈನ್ (ಪ್ರಮುಖರು, ಜೈನ ಬಸದಿ ಮಂಜೇಶ್ವರ.), ತುಳಸಿದಾಸ್ ಮಂಜೇಶ್ವರ, (ಅಧ್ಯಕ್ಷರು, ಬಾಕುಡ ಸಮಾಜ ಕೇಂದ್ರೀಯ ಮಂಡಳಿ.) ಮೊದಲಾದವರು ಉಪಸ್ಥಿತರಿರುವರು.
ಈ ವೇಳೆ ಮಂತ್ರಾಲಯದ 'ರಾಯರ ದರ್ಶನ' ಆಲ್ಬಮ್ ಸಾಂಗ್ ನ ನಿರ್ಮಾಣ ಕರ್ತೃ. ರಘುಭಟ್ ಹಾಗೂ ಸುಗುಣ ರಘುಭಟ್ ಮಂಜೇಶ್ವರ (ಬೆಂಗಳೂರು), ಹಾಗೂ ರಂಗಭೂಮಿ ಕಲಾವಿದೆ, ಕನ್ನಡ – ತುಳು ಚಲನಚಿತ್ರ ನಟಿ, ನ್ಯಾಷನಲ್ ಫೀಲ್ಡ್ ಅವಾರ್ಡ್ ಪ್ರಶಸ್ತಿ ಪುರಸ್ಕೃತರಾದ ರೂಪಶ್ರೀ ವರ್ಕಾಡಿ, ರಾಯರ ಭಕ್ತ, ಪ್ರಬುದ್ಧ ರಂಗ ಕಲಾವಿದ, ತುಳು - ಕನ್ನಡ, ಚಲನಚಿತ್ರ ನಟ, ನಿರ್ದೇಶಕ ಜೆ. ಪಿ ತೂಮಿನಾಡ್ ಇವರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಮಕ್ಕಳ ಕಲಿಕೆಗಾಗಿ ಹಾಗೂ ಸಂಸ್ಕಾರಯುತ ಶಿಕ್ಷಣಕ್ಕಾಗಿ 'ಓಂ ಶ್ರೀ ರಾಘವೇಂದ್ರಾಯ ನಮಃ' ಲೇಖನ ಮಾಲೆಯ ಅನಂತ ಕೋಟಿ ಅಷ್ಟಾಕ್ಷರ ಲೇಖನ ಯಜ್ಞದ ಪುಸ್ತಕವನ್ನು ಉಚಿತವಾಗಿ ನೀಡಲಾಗುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರದ್ದೆ, ಭಕ್ತಿಯಿಂದ ಪಾಲ್ಗೊಂಡು ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ ಮಂತ್ರಾಕ್ಷತೆಯ ಪ್ರಸಾದವನ್ನು ಸೀಕರಿಸಬೇಕಾಗಿ 'ರಾಯರ ಭಕ್ತರು ಮಂಜೇಶ್ವರ' ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 Comments