ಕಟೀಲು : ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಸಂಸ್ಮರಣಾ ಸಮಿತಿ ಮುಂಬೈ ಯುಎಇಯ ಪರವಾಗಿ ಪದ್ಮನಾಭ ಕಟೀಲು ದುಬೈ ಆಯೋಜನೆಯಲ್ಲಿ 26ನೇ ವರ್ಷದ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಕಾರ್ಯಕ್ರಮ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪರಿಸರದ ಶ್ರೀ ಗೋಪಾಲಕೃಷ್ಣ ಅಸ್ರಣ್ಣ ಸಭಾ ಭವನದಲ್ಲಿ ಆನುವಂಶಿಕ ಅರ್ಚಕರು, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕಟೀಲುನ ಆನುವಂಶಿಕ ಅರ್ಚಕರು, ಲಕ್ಷ್ಮೀನಾರಾಯಣ ಆಸ್ರಣ್ಣ ಕಟೀಲು ಮತ್ತು ಅರಿಕೋಡಿ ಶ್ರೀ ಚಾಮುಂಡೇಶ್ವರೀ ಕ್ಷೇತ್ರ, ಧರ್ಮದರ್ಶಿ ಹರೀಶ್ ಅರಿಕೋಡಿ ಇವರ ಶುಭ ಆಶಿರ್ವಾದದೂಂದಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿಯನ್ನು ಹರೀಶ್ ಸೇರಿಗಾರ್ ಎಕ್ಮೆ ಬಿಲ್ಡರ‍್ಸ್ ದುಬೈ ಇವರಿಗೆ, ದಾರ್ಶನಿಕ ಯಜಮಾನ ಕಲ್ಲಾಡಿ ವಿಠಲ ಶೆಟ್ಟಿ ಸ್ಮೃತಿ ಗೌರವವನ್ನು ಚಂದ್ರಹಾಸ್ ಎಂ. ರೈ ಬೊಳ್ನಾಡು ಗುತ್ತು, ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತ ಸ್ಮೃತಿ ಗೌರವ ರವಿಶಂಕರ ವಳಕ್ಕುಂಜ ನೀಡಿದರು, ಶ್ರೀ ಕಟೀಲು ಮೇಳ ಚೆಂಡೆಯ ಗುರಿಕಾರ ನಿಡ್ಲೆ ನರಸಿಂಹ ಭಟ್ ಸ್ಮೃತಿ ಗೌರವವನ್ನು ಮೋಹನ್ ಶೆಟ್ಟಿಗಾರ್ ಶ್ರೀ ಕಟೀಲು ಮೇಳ ಇವರಿಗೆ, ಕಲಾವಿದ ಸಂಮಾನವನ್ನ ನಾರಾಯಣ ಕುಲಾಲ್ ಶ್ರೀ ಕಟೀಲು ಮೇಳ ಇವರಿಗೆ, ಹೊರನಾಡ ಕಲಾಪೋಷಕ ಗೌರವವನ್ನು ದಿನೇಶ್ ಶೆಟ್ಟಿ ಕೊಟ್ಟಿಂಜ (ಯಕ್ಷಗಾನ ಅಭ್ಯಾಸ ಕೇಂದ್ರ, ಯುಎಇ) ಹೊರನಾಡ ಕಲಾವಿದ ಗೌರವ ಶೇಖರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ,ಹೊರನಾಡ ಸಮಾಜ ಸೇವಕ ಗೌರವ ಸುದರ್ಶನ ಹೆಗ್ಡೆ ಕಾರ್ಕಳ, ಹೊರನಾಡ ಸಂಘಟನಾ ಗೌರವ ದೀಪಕ್ ಎಸ್. ಪಿ. (ಅಧ್ಯಕ್ಷರು, ದುಬೈ ಬಿಲ್ಲವಾಸ್) ಹೊರನಾಡ ಭಾಷಾ ಗೌರವ (ತುಳು- ಕನ್ನಡ) ದಯಾನಂದ ಕಿರೋಡಿಯನ್ (ಸ್ಥಾಪಕ ಸದಸ್ಯರು, ಯಕ್ಷಮಿತ್ರರು, ದುಬೈ) ಮತ್ತು ಸಂಸ್ಥೆಯ ವಿಶೇಷ ಗೌರವಾರ್ಪಣೆ ಬಜಪೆ ಬಂಟರ ಸಂಘದ ಮಾಜಿ ಅಧ್ಯಕ್ಷ ಮಲಾಡ್ ಪ್ರಸಾದ್ ಹೋಟೆಲ್ ಮಾಲಕ, ಬಾಬು ಎಸ್. ಶೆಟ್ಟಿ ಪೆರಾರ, ಚಂದ್ರಶೇಖರ ಬೆಳ್ಚಡ ಕಟೀಲು (ಆಡಳಿತ ಮೊಕ್ತೇಸರರು, ಶ್ರೀ ಭಗವತೀ ಕ್ಷೇತ್ರ ಸಸಿಹಿತ್ಲು) ಡಾ. ಅರುಣೋದಯ ರೈ. ಬಿಳಿಯೂರುಗುತ್ತು (ಸಿ ಎಂಡಿ, ಸೈಂಟ್ ಆಗ್ನೆಸ್ ಸ್ಕೂಲ್, ಮೀರಾ ಭಯಂದರ್) ಇವರಿಗೆ ನೀಡಿ ಗೌರವಿಸಲಾಯಿತು,
ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಸರಕಾರದ ಆರೋಗ್ಯ ಸಚಿವರಾದ ಸನ್ಮಾನ್ಯ ಯು.ಟಿ ಖಾದರ್ ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ಶ್ರೀದೇವರ ದರ್ಶನ ಮಾಡಿ ಅತ್ಯಂತ ಪುರಾತನ ಮತ್ತು ಶಕ್ತಿ ಕೇಂದ್ರವಾದ ಕಟೀಲು ಈ ನಾಡಿನ ಸಂಸ್ಕೃತಿ ಉಳಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸಿದೆ ಹಿರಿಯರ ಸ್ಮರಣೆಯನ್ನು ಮಾಡಿರುವ ಈ ಕಾರ್ಯಕ್ರಮ ಅತ್ಯoತ ಶ್ರೇಷ್ಠವಾದದ್ದು ಎಂದು ನುಡಿದರು,
ಸಮಾರಂಭದ ಉದ್ಘಾಟನೆಯನ್ನು ಮೋಹನ್ ಆಳ್ವ ನೆರವೇರಿಸಿ ಈ ಪವಿತ್ರ ಕಾರ್ಯಕ್ರಮ ಮಾಡುವುದು ಮತ್ತು ನೋಡುವುದು ನಮಗೆಲ್ಲ ಭಾಗ್ಯ ಸಾಮಾನ್ಯ ಯಕ್ಷಗಾನದ ಪೋಷಕನಾಗಿರುವ ಪದ್ಮನಾಭ್ ಕಟೀಲು ಮತ್ತು. ಅಸ್ರಣ್ಣ ಮೇಲಿರುವ ನಂಬಿಕೆಯಿಂದ 100 ಯಕ್ಷಗಾನ ಬಯಲಾಟ ಪ್ರದರ್ಶನ ಮಾಡಿದ್ದಾರೆ, ಮತ್ತು 26ನೇ ವರ್ಷದಿಂದ ಕೀರ್ತಿಶೇಷ ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಕಾರ್ಯಕ್ರಮ ಮಾಡಿರುವುದು ನಂಬಿಕೆ ಕಾರಣ ಎಂದು ನುಡಿದರು.
ಲಕ್ಷ್ಮೀನಾರಾಯಣ ಅಸ್ರಣ್ಣ ಆಶೀರ್ವಚನ ನೀಡಿ ಪದ್ಮನಾಭ ಕಟ್ಟಿಲು ದುಬೈ ಇವರು ಕಳೆದ 26 ವರ್ಷಗಳಲ್ಲಿ ಕಾರ್ಯಕ್ರಮವನ್ನು ಸಂಯೋಜಿಸಿದ್ದಾರೆ ಕಟೀಲು ಅಮ್ಮ ನಾ ಮೇಲೆ ವಿಶ್ವಾಸ ವ್ಯಕ್ತ ಪಡಿಸುತ್ತದೆ. ಎಂದು ನುಡಿದರು. ವೇದಿಕೆಯಲ್ಲಿ , ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಕಲಾಪೋಷಕರು ಬಾಬು ಎಸ್. ಶೆಟ್ಟಿ ಪೆರಾರ. ಮಲಾಡ್, ಮುಂಬಯಿ ಚಂದ್ರಶೇಖರ ಬೆಳ್ಳಡ ಕಟೀಲು , ಅಗರಿ ರಾಘವೇಂದ್ರ ರಾವ್ ಅಗರಿ ಎಂಟರ್‌ಪ್ರೈಸಸ್ ರಾಘವೇಂದ್ರ ಆಚಾರ್ಯ ಬಟ್ಟೆ ಗಿರೀಶ್ ಎಂ. ಶೆಟ್ಟಿ, ಶ್ರೀ ಡೆವಲಪರ್ಸ್ ಕಟೀಲು , ರವಿ ಶೆಟ್ಟಿಗಾರ್ ಕಾರ್ಕಳ ಅಧ್ಯಕ್ಷರು, ಪದ್ಮಶಾಲಿ ಒಕ್ಕೂಟ, ಸಂದೀಪ್ ಬಿ. ಕೆ. ಕೂಳೂರು, ದಯಾನಂದ ಶೆಟ್ಟಿ ಹಿರಿಯಡ್ಕ, ನಿಡ್ಡೆ ರಾಮ್ ಭಟ್ ನರನ್ಸ್ ಫುಡ್, ಪ್ರಮೋದ್ ಭಟ್ ಶ್ರೀಮಾತಾ ಕ್ಯಾಟರರ್ಸ್, ಶ್ರೀಕಾಂತ ಶೆಟ್ಟಿ ಅಗರಿ ಬಾಳಿಕೆ ಹೋಟೇಲ್ ಸ್ವಯಮ್, ಧನಂಜಯ ಶೆಟ್ಟಿಗಾರ್ ಸಾಗರಿಕ ಪಕ್ಷಿಕೆರೆ, ರಾಧಾಕೃಷ್ಣ ನಿವಾಸ, ಕಿಲೆಂಜೂರು , ಪ್ರೇಮಾನಂದ ಕುಲಾಲ್ ಕೊಡಿಕಲ್, ರವಿ ಕೋಟ್ಯಾನ್ ಶಿಬರೂರು, ಮತ್ತಿತರರು ಉಪಸ್ಥಿತರಿದ್ದರು, ಸುಣ್ಣಂಬಳ ವಿಶ್ವೇಶ್ವರ ಭಟ್ ಅಭಿನಂದನಾ ಭಾಷಣ ಮಾಡಿದರು. ಡಾ. ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ, ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪದ್ಮನಾಭ ಕಟೀಲು ದಂಪತಿಯನ್ನು ಗೌರವಿಸಲಾಯಿತು. ಶ್ರೀಕ್ಷೇತ್ರ ಕಟೀಲಿನ 7 ಮೇಳದ ಆಯ್ದ ಕಲಾವಿದರ ಕೂಡುವಿಕೆಯಿಂದ 'ದೇವ ಸಂಕಲ್ಪ' ಪ್ರದರ್ಶನಗೊಂಡಿತು.
ವರದಿ : ದಿನೇಶ್ ಕುಲಾಲ್
ಚಿತ್ರ : ಭಾಸ್ಕರ್ ಕಾಂಚನ್

0 Comments