ಕಳತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಮಂಜೇಶ್ವರ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಮಂಜೇಶ್ವರ ತಾಲೂಕು ಹಾಗೂ ಕಿದೂರು ಶ್ರೀ ಮಹಾದೇವ ನವಜೀವನ ಸಮಿತಿ ಕಳತ್ತೂರು–ಕುಂಬಳೆ ವಲಯದ ಆಶ್ರಯದಲ್ಲಿ ನವಜೀವನೋತ್ಸವ ಹಾಗೂ 3ನೇ ವರ್ಷದ ‘ಕೆಸರ ಕಂಡೊಡು – ಕುಸಲ್ದ ಗೊಬ್ಬುಲು’ ಕ್ರೀಡೋತ್ಸವವು ಆಗಸ್ಟ್ 23ರಂದು ಕಳತ್ತೂರಿನಲ್ಲಿ ನಡೆಯಲಿದೆ.
ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ನಡೆಯುವ ಕಾರ್ಯಕ್ರಮವು ಬೆಳಗ್ಗೆ 9 ಗಂಟೆಗೆ ಆರಂಭಗೊಳ್ಳಲಿದೆ.
ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಉದ್ಘಾಟಿಸಲಿದ್ದು, ಕ್ರೀಡೋತ್ಸವವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ದಕ್ಷಿಣ ಕನ್ನಡ ಜಿಲ್ಲೆ–2ರ ನಿರ್ದೇಶಕ ಬಾಬು ನಾಯಕ್ ಉದ್ಘಾಟಿಸಲಿದ್ದಾರೆ. ಕಿದೂರು ಶ್ರೀ ಮಹಾದೇವ ನವಜೀವನ ಸಮಿತಿಯ ವರದಿಯನ್ನು ಸತೀಶ್ ಕುಲಾಲ್ ಶ್ರಾವಣಕೆರೆ ಮಂಡಿಸಲಿದ್ದಾರೆ.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಂಜೇಶ್ವರ ತಾಲೂಕು ಅಧ್ಯಕ್ಷ ಮಂಜುನಾಥ ಅಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಯಮಿ ಹಾಗೂ 2080ನೇ ಮಧ್ಯವರ್ಜನ ವ್ಯವಸ್ಥಾಪನ ಸಮಿತಿ ಕಳತ್ತೂರು ಅಧ್ಯಕ್ಷ ಜಯಪ್ರಸಾದ ರೈ ಕಾರಿಂಜ, ಎಸ್‌ಪಿಎಡಿ ಸಂಸ್ಥೆ ಬೆಂಗಳೂರು ನಿರ್ದೇಶಕ ಹಾಗೂ ಕಿದೂರು ಶ್ರೀ ಮಹಾದೇವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಕೆ.ಸಿ. ಮೋಹನ ಕಳತ್ತೂರು, ಜನಜಾಗೃತಿ ವೇದಿಕೆ ಕಾಸರಗೋಡು ತಾಲೂಕು ಮುಖಂಡ ಜಯರಾಮ ಪಾಟಾಲಿ ಪಡುಮಲೆ, ನಿಕಟಪೂರ್ವ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟಿತ್ತೋಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಜಿ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್‌ಬಾಗ್, 2080ನೇ ಮಧ್ಯವರ್ಜನ ವ್ಯವಸ್ಥಾಪನ ಸಮಿತಿ ಕಳತ್ತೂರು ಗೌರವಾಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಜನಜಾಗೃತಿ ವೇದಿಕೆ ಮಂಜೇಶ್ವರ ತಾಲೂಕು ಉಪಾಧ್ಯಕ್ಷ ಹರೀಶ್ ಶೆಟ್ಟಿ ಕಡಂಬಾರು, ಕುಂಬಳೆ ವಲಯಾಧ್ಯಕ್ಷ ಮಹೇಶ್ ಪುಣಿಯೂರು, ಕುಂಬಳೆ ಗ್ರಾಮ ಪಂಚಾಯತ್ ಸದಸ್ಯ ಸುಕೇಶ್ ಭಂಡಾರಿ, ನಿವೃತ್ತ ಮುಖ್ಯೋಪಾಧ್ಯಾಯ ನರಹರಿ ಮಾಸ್ಟರ್ ಪಾಲೆಚ್ಚಾರ್, ನಿವೃತ್ತ ವಿಲೇಜ್ ಆಫೀಸರ್ ಶಿವರಾಮ ಶೆಟ್ಟಿ ಮಾಣಿಬೆಟ್ಟು, ಮುಖ್ಯೋಪಾಧ್ಯಾಯ ಬಾಲಕೃಷ್ಣ ಮಾಸ್ಟರ್ ಹಾಗೂ ಸಮಿತಿಯ ಸ್ಥಾಪಕಾಧ್ಯಕ್ಷ ಯೋಗೀಶ್ ಆಚಾರ್ಯ ಶ್ರೀನಗರ ಸೇರಿದಂತೆ ಗಣ್ಯರು ಉಪಸ್ಥಿತರಿರುವರು.
ಸಂಜೆ ಸಮಾರೋಪ ಸಮಾರಂಭ ಸಂಜೆ 5.30ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ಕಿದೂರು ಶ್ರೀ ಮಹಾದೇವ ನವಜೀವನ ಸಮಿತಿಯ ಸ್ಥಾಪಕಾಧ್ಯಕ್ಷ ಯೋಗೀಶ್ ಆಚಾರ್ಯ ಶ್ರೀನಗರ ಸ್ವಾಗತಿಸಲಿದ್ದು, ಸಮಿತಿಯ ಅಧ್ಯಕ್ಷ ಚಂದ್ರಹಾಸ ಶ್ರಾವಣಕೆರೆ ಅಧ್ಯಕ್ಷತೆ ವಹಿಸಲಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಮಂಜೇಶ್ವರ ತಾಲೂಕು ಯೋಜನಾಧಿಕಾರಿ ಶಶಿಕಲಾ ಸುವರ್ಣ, ಕರಾವಳಿ ಪ್ರಾದೇಶಿಕ ವಿಭಾಗ ಉಡುಪಿಯ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ ಆಚಾರ್ಯ, ಕಳತ್ತೂರು ಒಕ್ಕೂಟ ಅಧ್ಯಕ್ಷ ಉದಯ, ಕುಪ್ಪೆ ಪಂಜುರ್ಲಿ ದೈವಸ್ಥಾನ ಕುಂಟೆಂಗೇರಡ್ಕದ ಅಧ್ಯಕ್ಷ ಚಂದ್ರ ಕಾಜೂರು, ಮಹಾದೇವ ಭಜನಾ ಮಂದಿರ ಕಳತ್ತೂರು ಅಧ್ಯಕ್ಷ ಬಾಲಕೃಷ್ಣ ನೆಲ್ಕಡ್ಕ, ಕೃಷಿಕ ಆನಂದ ರೈ ಕಾಜೂರು, ಸ್ಥಳದಾನಿ ಅಬ್ದುಲ್ ರಹಿಮಾನ್, ಸಾಮಾಜಿಕ ಮುಂದಾಳುಗಳಾದ ಸುರೇಶ ಶೆಟ್ಟಿ ಮಾಣಿಬೆಟ್ಟು ಕಿದೂರು ಹಾಗೂ ಪ್ರಸಾದ್ ಶೆಟ್ಟಿ ಟೆಂಪಲ್ ರೋಡ್ ಕುಂಬಳೆ, ಶಿವಶಕ್ತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಕಿದೂರು ಅಧ್ಯಕ್ಷ ಚಂದ್ರರಾಜ್ ಶೆಟ್ಟಿ ಕಾಜೂರು, ಮಡ್ಡ ಒಕ್ಕೂಟದ ಕಾರ್ಯದರ್ಶಿ ಭವಾನಿಶಂಕರ ಆಚಾರ್ಯ ಶ್ರೀನಗರ ಹಾಗೂ ನಾಟಿ ವೈದ್ಯ ಶ್ರೀನಿವಾಸ ಆಳ ಕಳತ್ತೂರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಕಿದೂರು ಶ್ರೀ ಮಹಾದೇವ ನವಜೀವನ ಸಮಿತಿಯ ಪರವಾಗಿ ನಾರಾಯಣ ಟೈಲರ್ ಕಳತ್ತೂರು ಧನ್ಯವಾದ ಸಲ್ಲಿಸಲಿದ್ದಾರೆ. ನವಜೀವನದ ಸಂದೇಶವನ್ನು ಜನಮಾನಸಕ್ಕೆ ತಲುಪಿಸುವುದರ ಜೊತೆಗೆ ಗ್ರಾಮೀಣ ಕ್ರೀಡಾ ಸಂಭ್ರಮಕ್ಕೆ ವೇದಿಕೆಯಾಗಲಿರುವ ‘ಕೆಸರ ಕಂಡೊಡು – ಕುಸಲ್ದ ಗೊಬ್ಬುಲು’ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

0 Comments