Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಶಿಕ್ಷಕ, ಸಾಹಿತಿ, ನಾಟಕಕಾರ ದಿವಾಕರ ಬಲ್ಲಾಳ್. ಎ. ಬಿ. ಇವರ ಎರಡು ನಾಟಕ ಕೃತಿಗಳ ಲೋಕಾರ್ಪಣೆ


ಮಂಗಳೂರು : ಪ್ರದೀಪ್ ಕುಮಾರ್. ಪಿ. ವಿ.ಯವರ ಸಾರಥ್ಯದ ಕಥಾಬಿಂದು ಪ್ರಕಾಶನವು ಪ್ರಕಟಿಸಿದ ಕಾಸರಗೋಡಿನ ಯುವ ಕವಿ, ಲೇಖಕ ದಿವಾಕರ ಬಲ್ಲಾಳರ ಎರಡು ಕೃತಿಗಳಾದ ‘ಒಳಮನದ ಸುಳಿಗಳು’ (ಕವನ ಸಂಕಲನ) ಮತ್ತು ‘ಪಂಚರಂಗಿ’ (ಕನ್ನಡ ಸಾಮಾಜಿಕ ಕಿರುನಾಟಕಗಳ ಸಂಕಲನ) ಯು  ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಮುಡಿಪು, ಮಂಗಳೂರು. ಇಲ್ಲಿ ನಡೆದ ‘ಕಥಾಬಿಂದು ವಿಶ್ವ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ’ದಲ್ಲಿ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಕನ್ನಡದ ಹಿರಿಯ ಸಾಹಿತಿ ಲಕ್ಷ್ಮಣ ಮೂರ್ತಿಯವರು ಕೃತಿಗಳನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಕಥಾಬಿಂದು ಪ್ರದೀಪ್ ಕುಮಾರ್. ಪಿ. ವಿ, ವಾಮನ್ ರಾವ್ ಬೇಕಲ್, ಭಾರತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಸ್ಥಾಪಕರಾದ ಸುಬ್ರಹ್ಮಣ್ಯ ಭಟ್ ಕೊಡಕ್ಕಲ್ಲು ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ನಾಡಿನ ವಿವಿಧ ಕವಿಗಳ ಸುಮಾರು ಹದಿನೈದು ಕೃತಿಗಳನ್ನು ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು. ಪ್ರದೀಪ್ ಕುಮಾರ್ ಪಿ. ವಿ. ಸ್ವಾಗತಿಸಿ, ದಿವಾಕರ ಬಲ್ಲಾಳ್ ಎ. ಬಿ. ನಿರೂಪಿಸಿದರು.

Post a Comment

0 Comments

ಜಾಹೀರಾತು

Responsive Advertisement