ಪೆರ್ಲ: ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಾಜೇಶ್ ಬಜಕೂಡ್ಲು ಅವರು ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಶಾಲಾ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವಿರೋಧವಾಗಿ ಇವರನ್ನು ಆಯ್ಕೆ ಮಾಡಲಾಯಿತು. ಈ ಹಿಂದೆ ಪೆರ್ಲ ಶ್ರೀ ಸತ್ಯನಾರಾಯಣ ಎಲ್.ಪಿ.ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿದ್ದ ಇವರು ಶಾಲೆಗೆ ಸಮಾನಮನಸ್ಕರೊಡಗೂಡಿ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಸಾಥ್ ನೀಡಿದ್ದರು. ಮಕ್ಕಳ ಮನೋ ಕೌಶಲ್ಯದ ವೃದ್ಧಿಗಾಗಿ ರಂಗ ಡಿಂಡಿಮ ಪೆರ್ಲ ಎಂಬ ಸಂಸ್ಥೆಯ ಅಧ್ಯಕ್ಷರಾಗಿ ಮಕ್ಕಳ ರಂಗ ಶಿಬಿರ ಸಹಿತ ವಿವಿದೆಡೆಗಳಲ್ಲಿ ಮಕ್ಕಳ ನಾಟಕ ಪ್ರದರ್ಶನ ಹಾಗೂ ಅಧ್ಯಯನ ಪ್ರವಾಸಗಳಿಗೆ ನೇತೃತ್ವ ನೀಡಿದ್ದರು.
ಪಿಕಪ್ ಚಾಲಕ, ಮಾಲಕರಾಗಿ ದುಡಿಯುವ ಸಾಮಾನ್ಯ ಕಾರ್ಮಿಕ ವರ್ಗದಿಂದ ಶಾಲಾ ರಕ್ಷಕ ಶಿಕ್ಷಕ ಸಂಘದ ನಾಯಕತ್ವದ ಜವಾಬ್ದಾರಿಯವರೆಗೆ ಬಂದಿರುವುದು ಅವರ ಸಾಮಾಜಿಕ ಕಾಳಜಿ ಮತ್ತು ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ.

0 Comments