ಕಾಸರಗೋಡು : ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವೆಸ್ಟ್ ಯೂನಿಟ್ ನೇತೃತ್ವದಲ್ಲಿ ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷ ವಸಂತ್ ಕೆರೆಮನೆ ವಹಿಸಿದ್ದರು. ಈ ಸಂದರ್ಭದಲ್ಲಿ, 15ನೇ ಡಿಜೆ ಮೆಮೋರಿಯಲ್ ಫೋಟೋಗ್ರಫಿ ಅವಾರ್ಡ್-2026 ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ದಿನೇಶ್ ಇನ್ಸೈಟ್ ಅವರನ್ನು ಸನ್ಮಾನಿಸಲಾಯಿತು.
ಪ್ರಶಸ್ತಿ ವಿಜೇತರನ್ನು ಹಿರಿಯ ಛಾಯಾಗ್ರಾಹಕ ಮೈಂದಪ್ಪ ಶಾಲು ಹೊದಿಸಿ, ಜಯಪ್ರಕಾಶ್ ಪ್ರಕಾಶ್ ಸ್ಟುಡಿಯೋ, ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಗೌರವ ಸ್ವೀಕರಿಸಿದ ಅವರು ಛಾಯಾಗ್ರಹಣಕ್ಕೆ ಬಂದ ದಾರಿ ಹಾಗೂ ಹಲವು ಅನುಭವದ ನುಡಿಗಳನ್ನಾಡಿ ವೆಸ್ಟ್ ಯೂನಿಟ್ ಸನ್ಮಾನಿಸಿದ ಸಂತೋಷವನ್ನು ವ್ಯಕ್ತಪಡಿಸಿದರು. ಯೂನಿಟ್ ನಿರೀಕ್ಷಕ ಅಜಿತ್ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಎಕೆಪಿಎ ವಲಯ ಉಪಾಧ್ಯಕ್ಷ ಸುಬ್ರಹ್ಮಣ್ಯ ವಿಡಿಯೋನಿಕ್ಸ್, ಸಿಗ್ನೇಚರ್, ಯುನಿಟ್ ಪಿ.ಆರ್.ಓ ವಿನೋದ್ ಕಲ್ಲಂಗೈ, ಯುನಿಟ್ ಸದಸ್ಯ ರತೀಶ್ ರಾಮು ಉಪಸ್ಥಿತರಿದ್ದರು. ಕಾರ್ಯದರ್ಶಿ ಶಾಲಿನಿ ರಾಜೇಂದ್ರನ್ ಸ್ವಾಗತಿಸಿ, ವಲಯ ಜತೆ ಕಾರ್ಯದರ್ಶಿ ಗಣೇಶ್ ರೈ ವಂದಿಸಿದರು.

0 Comments