ಮೀಯಪದವು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ವಿಭಾಗದ ನೇತೃತ್ವದಲ್ಲಿ ಜ್ಞಾನದೀಪ ವಿಶೇಷ ಅನುದಾನದಿಂದ ಶ್ರೀವಿದ್ಯಾವರ್ಧಕ ಪ್ರೌಢ ಶಾಲೆ ಮೀಯಪದವು ಇಲ್ಲಿಗೆ 10 ಡೆಸ್ಕ್ ಬೆಂಚ್ ಗಳನ್ನು ವಿತರಿಸಲಾಯಿತು. ಶಾಲೆಯ ಸಂಚಾಲಕರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡುತ್ತಾ ,ಶ್ರೀ ಕ್ಷೇತ್ರ ಧರ್ಮಸ್ಥಳವು ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಾಡಿನಾದ್ಯಂತ ಜಾರಿಗೆ ತಂದಿದ್ದು, ಧರ್ಮ-ಜಾತಿಗೆ ಅತೀತವಾಗಿ ಮಾನವ ಕುಲದ ಶ್ರೇಯೋಭಿವೃದ್ಧಿಗೆ ಅಗತ್ಯವಿರುವ ಜನಹಿತ ಯೋಜನೆಗಳನ್ನು ಪರಿಚಯಗೊಳಿಸಿದೆ. ಹೃದಯ ಪೂರ್ವಕ ಕೃತಜ್ಞತೆ ಈ ಬಗ್ಗೆ ವ್ಯಕ್ತಪಡಿಸುತ್ತೇವೆ ಎಂದು ಅಭಿಪ್ರಾಯ ಪಟ್ಟರು
ಜನಜಾಗೃತಿ ವೇದಿಕೆ ಕಾಸರಗೋಡು ಇದರ ಸ್ಥಾಪಕ ಅಧ್ಯಕ್ಷರಾದ ಗೋಪಾಲ ಶೆಟ್ಟಿ ಅರಿಬೈಲು ಅವರು ಮಾತನಾಡುತ್ತ ಧರ್ಮಸ್ಥಳದ ವಿವಿಧ ಯೋಜನೆಗಳ ಹಾಗೂ ಡಾ| ವೀರೇಂದ್ರ ಹೆಗಡೆ ಅವರ ದೂರದೃಷ್ಟಿಗಳ ಜನೋಪಯೋಗಿ ಕೆಲಸ ಕಾರ್ಯಗಳ ಬಗ್ಗೆ, ಕ್ಷೇತ್ರದಿಂದ ನೀಡುವ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು. ಸುಂಕದಕಟ್ಟೆ ವಲಯದ ಮೇಲ್ವಿಚಾರಕರಾದ ಕೃಷ್ಣಪ್ಪ ಪೂಜಾರಿ, ಜನಜಾಗೃತಿ ವೇದಿಕೆ ಇದರ ನಿಕಟ ಪೂರ್ವ ಅಧ್ಯಕ್ಷರಾದ ಅಶ್ವಥ್ ಪೂಜಾರಿ ಲಾಲ್ ಬಾಗ್, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕರಾದ ಶ್ರೀಧರ ರಾವ್, ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಗೀತಾ ಲಕ್ಷ್ಮಿ, ಒಕ್ಕೂಟದ ಪದಾಧಿಕಾರಿಗಳಾದ ಮೋನಪ್ಪ ಪೂಜಾರಿ, ಶ್ರೀ ಕಿರಣ್ ಬೆಜ್ಜ ಸೇವಾ ಪ್ರತಿನಿಧಿಗಳಾದ ಮಮತಾ, ದೀಪ ಶ್ರೀ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣ ಪ್ರಸಾದ್, ಹೈಯರ್ ಸೆಕೆಂಡರಿ ವಿಭಾಗದ ಪ್ರಾಂಶುಪಾಲರಾದ ಶ್ರೀ ರಮೇಶ್, ಶಾಲಾ ಅಧ್ಯಾಪಕ ವೃಂದ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಮೃದುಲಾ ಕೆ. ಯಂ ಸ್ವಾಗತಿಸಿದರು. ಕನ್ನಡ ಅಧ್ಯಾಪಕ ರಾಜಾರಾಮ ಧನ್ಯವಾದಗಳನ್ನಿತ್ತರು. ಹಿಂದಿ ಅಧ್ಯಾಪಕ ಲಕ್ಷ್ಮೀಶ ಬೊಳುಂಬು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರತಿನಿಧಿ ಮೇಲ್ವಿಚಾರಕರಾದ ಕೃಷ್ಣಪ್ಪ ಪೂಜಾರಿ ಅವರನ್ನು ಅಭಿನಂದಿಸಲಾಯಿತು.
ಚಿತ್ರ, ವರದಿ: ಅಲಂಕಾರ್ ಡಿಜಿಟಲ್ ಸ್ಟುಡಿಯೊ ಮೀಯಪದವು
0 Comments