Ticker

6/recent/ticker-posts

ಒಳ ಉಡುಪಿನಲ್ಲಿ ಹಾಗೂ ಕಾರಿನ ಸೀಟಿನಡಿಯಲ್ಲಿ ಅಡಗಿಸಿಟ್ಟು ಎಂಡಿಎಂಎ ಸಾಗಿಸುತ್ತಿದ್ದ ಯುವತಿಯ ಬಂಧನ


 ಒಳ ಉಡುಪಿನಲ್ಲಿ ಹಾಗೂ ಕಾರಿನ ಸೀಟಿನಡಿಯಲ್ಲಿ ಎಂಡಿಎಂಎ ಅಡಗಿಸಿ ಸಾಗಿಸಲಾಗುತ್ತಿದ್ದ  ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲ್ಲಂ ‌‌  ಅಂಜಾಲುಮೂಡ್ ಪನಯಂ ನಿವಾಸಿ ಅನಿಲ ರವೀಂದ್ರನ್(34) ಬಂಧಿತ ಯುವತಿ. ಕೊಲ್ಲಂ ಸಿಟಿ ಪೊಲೀಸರು, ಮಾದಕ ದ್ರವ್ಯ ಪತ್ತೆ ಹಚ್ಚುವ ಡಾನ್ಸಾಫ್ ತಂಡ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಈಕೆಯನ್ನು ‌ಪತ್ತೆ ಹಚ್ಚಲಾಗಿದೆ. ಎಂಡಿಎಂಎ ಸಾಗಾಟ ಪ್ರಕರಣದಲ್ಲಿ ಅನಿಲ ಈ ಹಿಂದೆಯೂ ಬಂಧಿತಳಾಗಿದ್ದಳು. ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಈಕೆ ಎಂಡಿಎಂಎ ಪೂರೈಸುತ್ತಿದ್ದಾಳೆ ಎಂಬ ವರದಿಯ ಹಿನ್ನೆಲೆಯಲ್ಲಿ ಪೊಲೀಸರು ಈಕೆಯ ಮೇಲೆ ನಿಗಾ ಇಟ್ಟಿದ್ದರು.ಶುಕ್ರವಾರ ಸಂಜೆ 5 ಗಂಟೆಯ ವೇಳೆ ಅತಿ ವೇಗದಿಂದ ಬಂದ ಕಾರನ್ನು ನಿಲ್ಲಿಸಲು ಸೂಚಿಸಿದರೂ ಅದು ನಿಲ್ಲಿಸದೇ ಸಾಗಿತು.ಪೊಲೀಸರು ಇದನ್ನು ಬೆನ್ನಟ್ಟಿ ಹಿಡಿದಾಗ ಕಾರಿನ ಸೀಟಿನಡಿಯಿಂದ 5 ಲಕ್ಷ ರೂ ಬೆಲೆಯ ಎಂಡಿಎಂಎ ಪತ್ತೆಯಾಯಿತು. ಅನಂತರ ಅನಿಲ ಳನ್ನು ಕೊಲ್ಲಂ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ದು ತಪಾಸಣೆ ನಡೆಸಿದಾಗ ಒಳ ಉಡುಪಿನಲ್ಲಿ 46 ಗ್ರಾಂ ಎಂಡಿಎಂಎ ಪತ್ತೆಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ

Post a Comment

0 Comments