ಬೇಕಲ: ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 1 ಕೋಟಿ ಹದಿನೇಳುವರೆ ಲಕ್ಷ ರೂ. ಕಾಳಧನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂದಪಟ್ಟಂತೆ ಮೇಲ್ಪರಂಬ ನಿವಾಸಿ ಅಬ್ದುಲ್ ಖಾದರ್(46) ಎಂಬಾತನನ್ನು ಬಂಧಿಸಲಾಗಿದೆ. ಇಂದು (ಮಂಗಳವಾರ) ಬೆಳಗ್ಗೆ ಈ ಕಾರ್ಯಾಚರಣೆ ನಡೆದಿದೆ.
ಜಿಲ್ಲಾ ಪೊಲೀಸ್ ಅಧಿಕಾರಿ ವಿಜಯ ಭರತ್ ರೆಡ್ಡಿ ಅವರ ಆದೇಶದಂತೆ ಬೇಕಲ ಡಿ.ವೈ.ಎಸ್.ಪಿ. ವಿ.ವಿ.ಮನೋಜ್, ಇತರ ಅಧಿಕಾರಿಗಳಾದ ಅಪರ್ಣ, ಕೆ.ಲಿ.ಶೈನ್, ಮನುಕೃಷ್ಣನ್, ಅಖಿಲ್, ಸುಭಾಷ್, ಬಾಲಚಂದ್ರನ್, ವಿಜೇಶ್, ತೀರ್ಥನ್, ಚಾಲಕ ಸಜೇಶ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
ಪಾಲಕುನ್ನು ಭಾಗದಿಂದ ಕಾಞಂಗಾಡು ಭಾಗಕ್ಕೆ ಹೋಗುತ್ತಿದ್ದ ಆರೋಪಿ ಅಬ್ದುಲ್ ಖಾದರ್ ಚಲಾಯಿಸಿದ ಕಾರು ತಡೆದು ನಿಲ್ಲಿಸಿ ಪರಿಶೋಧಿಸಿದಾಗ ಕಾಳಧನ ಪತ್ತೆಯಾಗಿದೆ.
ಕಾರಿನೊಳಗೆ ಪ್ರತ್ಯೇಕ ಕೋಣೆ ನಿರ್ಮಿಸಿ ಅದರೊಳಗೆ ಹಣ ಇರಿಸಿ ಸಾಗಿಸಲಾಗಿತ್ತು
0 Comments