Ticker

6/recent/ticker-posts

Ad Code

70 ಸಾವಿರ ರೂ ದಾಟಿದ ಚಿನ್ನದ ಬೆಲೆ, ಇನ್ನಷ್ಟು ಏರಿಕೆ ಸಾಧ್ಯತೆ


 ಕಾಸರಗೋಡು: ಚಿನ್ನದ ಬೆಲೆ ಪವನಿಗೆ 70 ಸಾವಿರ ದಾಟಿದೆ. ಇಂದು (ಶನಿವಾರ) 200 ರೂ. ಪವನಿಗೆ ಹೆಚ್ಚಳ ಉಂಟಾಗಿದೆ. ಇದರಿಂದಾಗಿ ಇಂದಿನ ಒಂದು ಪವನು ಚಿನ್ನದ ಬೆಲೆ  70160 ರೂ. ಆಗಿದೆ. ಗ್ರಾಂ.ಚಿನ್ನದ ಬೆಲೆ 8770 ರೂ.ಆಗಿದೆ. 2025 ರಲ್ಲಿ ಈ ವರೆಗೆ ಒಂದು ಪವನು ಚಿನ್ನಕ್ಕೆ 13280 ರೂ ಹೆಚ್ಚಾಗಿದೆ. ಚಿನ್ನದ ಬೆಲೆ 70 ಸಾವಿರ ರೂ ಮಾಡುವುದರೊಂದಿಗೆ ಮದುವೆ ಸಮಾರಂಭಗಳಿಗೆ ಚಿನ್ನ ಬಳಕೆಯಲ್ಲಿ ನಿಯಂತ್ರಣ ಬರಲಿದೆ.

   ಚಿನ್ನದ ಬೆಲೆಯ ಜತೆಗೆ ಜಿ.ಎಸ್.ಟಿ, ಹಾಲ್ ಮಾರ್ಕ್ ಶುಲ್ಕ, ಮಜೂರಿ ಎಂಬಿವು ಸೇರುವಾಗ ಒಂದು ಪವನಿಗೆ ಕನಿಷ್ಠ 77 ಸಾವಿರ ರೂ.ತೆರಬೇಕಾಗುತ್ತದೆ. 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿಯೂ ಹೆಚ್ಚಳ ಉಂಟಾಗಿದೆ. ಅಮೆರಿಕಾ- ಚೀನಾ ವ್ಯಾಪಾರ ಯುದ್ದ, ಡಾಲರಿನ‌ ಮೌಲ್ಯ ಕುಸಿತ, ಶೇರು ಮಾರುಕಟ್ಟೆಯಲ್ಲಿನ ಕುಸಿತ ಇವು ಚಿನ್ನದ ಬೆಲೆಯೇರಲು ಪ್ರಮುಖ ಕಾರಣವೆನ್ನಲಾಗಿದೆ

Post a Comment

0 Comments