Ticker

6/recent/ticker-posts

ಬಿಜೆಪಿ ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರಶೇಖರನ್ ಗೆ ಭವ್ಯ ಸ್ವಾಗತ, ವಿಕಸಿತ ಕೇರಳ ಸಮಾವೇಶ ಉದ್ಘಾಟನೆ


 ಕಾಸರಗೋಡು' ಕಾಂಗ್ರೆಸ್ ‌ಪಕ್ಷವು ದೇಶದಲ್ಲಿ ವೋಟ್ ಬ್ಯಾಂಕ್ ರಾಜಕೀಯ ಜ್ಯಾರಿಗೊಳಿಸುತ್ತಿದೆಯೆಂದು ಬಿಜೆಪಿ ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಹೇಳಿದರು. ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಅವರು ವಿಕಸಿತ ಕೇರಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಈ ರೀತಿ ಹೇಳಿದರು. ಪಾಕಿಸ್ಥಾನೀ ಭಯೋತ್ಪಾದಕರ ಕುರಿತು ಮಾತನಾಡುವಾಗ ಅದು ಹೇಗೆ ಇಸ್ಲಾಮೋಫೋಬಿಯ ಆಗಲಿದೆ ಎಂದವರು‌ ಪ್ರಶ್ನಿಸಿದರು. ಪಹಲ್ಗಾಂ ಭಯೋತ್ಪಾದಕ ದಾಳಿ ವಿಷಯದಲ್ಲಿ ಕಾಂಗ್ರೆಸ್ ‌ಹಾಗೂ ಸಿಪಿಎಂ ಪಕ್ಷಗಳು ಪಾಕಿಸ್ತಾನ ಪರ ನಿಲುವು ತಾಳುತ್ತಿದೆ.ಅಶಾ ಕಾರ್ಯಕರ್ತೆಯರ ವೇತನ ಹೆಚ್ಚಳ, ಸರಕಾರೀ ನೌಕರರ ವೇತನ,ಪಿಂಚಣಿ ಇದ್ಯಾವುದೂ ವಿತರಣೆ ಆಗುತ್ತಿಲ್ಲ. ಕೇಂದ್ರ ಸರಕಾರ ಜಾರಿಗೊಳಿಸಿರುವ ರಾಷ್ಟ್ರೀಯ ಹೆದ್ದಾರಿ ಮಾತ್ರ ಇಲ್ಲಿದೆ. ಮುಸ್ಲಿಂ ಲೀಗ್ ಎಂಬುದು ಸಿರಿವಂತರ ಪಕ್ಷವಾಗಿದೆ ಎಂದವರು ಹೇಳಿದರು. 


ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್.ಅಧ್ಯಕ್ಷತೆ ವಹಿಸಿದರು. 


ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ.ಅಬ್ದುಲ್ಲ ಕುಟ್ಟಿ,  ಪಿ.ಕೆ.ಕೃಷ್ಣದಾಸ್, ಅಡ್ವ.ಕೆ.ಶ್ರೀಕಾಂತ್, ಕೆ.ರಂಜಿತ್, ಎಸ್.ಸುರೇಶ್, ಅನೂಪ್ ಆಂಟಣಿ, ಎಂ.ಸಂಜೀವ ಶೆಟ್ಟಿ,  ರವೀಶ ತಂತ್ರಿ ಕುಂಟಾರು, ಅಡ್ವ.ಕೆ.ಬಾಲಕೃಷ್ಣ ಶೆಟ್ಟಿ, ಅಡ್ವ.ಎಂ.ನಾರಾಯಣ ಭಟ್, ವಿ.ರವೀಂದ್ರನ್, ಕರುಣಾಕರನ್ ಮಾಸ್ತರ್,ಸವಿತಾ ಟೀಚರ್, ಸತೀಶ್ಚಂದ್ರ ಭಂಡಾರಿ ಜಿಲ್ಲಾ ಮಟ್ಟದ ನೇತಾರರು ಭಾಗವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್.ಪಿ.ಆರ್.ಸ್ವಾಗತಿಸಿ ಮನುಲಾಲ್ ಮೇಲತ್ ವಂದಿಸಿದರು. ಬೆಳಗ್ಗೆ ರಾಜೀವ್ ಚಂದ್ರಶೇಖರ್ ಅವರಿಗೆ ರೈಲು ನಿಲ್ದಾಣದಿಂದ ಭವ್ಯ ಸ್ವಾಗತ ನೀಡಲಾಯಿತು. ನೂರಾರು ಕಾರ್ಯಕರ್ತರು ಭಾಗವಹಿಸಿದರು.

Post a Comment

0 Comments