Ticker

6/recent/ticker-posts

ವಳಮಲೆ‌ ಪದ್ಮನಾಭ ಶೆಟ್ಟಿ ಅವರ ನಿಧನಕ್ಕೆ ಬಂಟರ ಸಂಘದಿಂದ ಶ್ರದ್ದಾಂಜಲಿ

  .ಬದಿಯಡ್ಕ: ಬಂಟರ ಸಂಘದ ಅಧ್ಯಕ್ಷ ಸಾಮಾಜಿಕ ಧಾರ್ಮಿಕ ಮುಂದಾಳು ಶ್ರೀ ಪದ್ಮನಾಭ ಶೆಟ್ಟಿ ವಳಮಲೆ ಇವರಿಗೆ ಶ್ರದ್ಧಾಂಜಲಿ ಸಭೆ ಕುಂಬಳೆ ವಲಯ ಬಂಟರ ಸಂಘದ ಬದಿಯಡ್ಕ  ಕಚೇರಿಯಲ್ಲಿ ಜರಗಿತು.ಕುಂಬಳೆ ಪೀರ್ಕಾ ಉಪಾಧ್ಯಕ್ಷ  ಸಂತೋಷ್ ರೈ ಬಜದ ಗುತ್ತು  ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಂಟರ ಉಪಾಧ್ಯಕ್ಷ  ಪಿಜಿ ಚಂದ್ರಹಾಸ ರೈ ಮಾತನಾಡಿ ಅವರ ಅಗಲುವಿಕೆ ಬಂಟ ಸಮಾಜಕ್ಕೆ ತುಂಬಲಾರದ ನಷ್ಟ  ಅವರೊಂದಿಗಿನ  ಒಡನಾಟವನ್ನು ಸ್ಮರಿಸುತ್ತಾ ಬಂಟ ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದರು. ಬೆಳ್ಳೂರು ಬಂಟರ ಮಾತೃ ಸಮಿತಿ ಅಧ್ಯಕ್ಷೆ ಡಾಕ್ಟರ್ ವಿದ್ಯಾಮೋಹನ್ ದಾಸ್ ರೈ ಬಂಟರ ಸಂಘದ ಅವರ ಕಾರ್ಯಚಟುವಟಿಕೆ ,ನೇರ ನಡೆ ನುಡಿ ವ್ಯಕ್ತಿತ್ವದ ಬಗ್ಗೆ  ಮಾತನಾಡಿದರು.

ಜಿಲ್ಲಾ ಕೋಶಾಧಿಕಾರಿ  ಚಿದಾನಂದ ಆಳ್ವ, ಮಾತೃ ಸಂಘದ ಕಾಸರಗೋಡು ತಾಲೂಕು ಸಹ ಸಂಚಾಲಕ  ಸುದೀರ್ ಕುಮಾರ್ ರೈ, ಫಿರ್ಕಾ ಸಂಘದ ಪ್ರದಾನ ಕಾರ್ಯದರ್ಶಿ  ಅಶೋಕ್ ರೈ ಕೊರೆಕ್ನಾನ, ಪಂಚಾಯತ್ ಘಟಕದ ಅಧ್ಯಕ್ಷರಾದ  ಸುರೇಶ್ ಕುಮಾರ್ ಶೆಟ್ಟಿ ಪುಕ್ಕಟ್ಟೆ ,ನಿರಂಜನ್ ರೈ ಪೆರಡಾಲ, ಕುಂಬಳೆ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಪುಷ್ಪ ಕಾಜೂರು,, ಮನಮೋಹನ ರೈ ಪಿಂಡಗ, ಹರಿಪ್ರಸಾದ್ ರೈ 

ಮಾಹಿಲೆಂಗಿ, ಶರತ್ ಚಂದ್ರ ಶೆಟ್ಟಿ ಶೇಣಿ,  ದಯಾನಂದ ರೈ ಕಳುವಾಜೆ, ಹರ್ಷಕುಮಾರ್ ರೈ ಬೇಲಿಂಜ, ಮೊದಲಾದವರು ನುಡಿ ನಮನ ಸಲ್ಲಿಸಿದರು. ಹರೀಶ್ ಆಳ್ವ ಉಜಾರು, ಜಗನ್ನಾಥ ರೈ ಕೊರೆಕ್ಕಾನ,  ಜಯರಾಜ್ ರೈ ಎಡಮೂಗೆರು, ಪದ್ಮಾವತಿ, ಎಡಮೂಗೆರು, ಶ್ಯಾಮಲ.ರೈ ಸಸಿಹಿತ್ತಲು, ಜಯಲಕ್ಷ್ಮಿಕಳುವಾಜೆ, ದಯಾನಂದ ರೈ ಮೇಗಿನ ಕಡಾರು,ಸಂತೋಷ್ ರೈ, ಅನಂತ.ರೈ , ಮೊದಲಾದವರು ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದರು.

Post a Comment

0 Comments