Ticker

6/recent/ticker-posts

ಆಟೋ ರಿಕ್ಷಾ ಚಾಲಕನನ್ನು ಗುಂಡಿಟ್ಟು ಕೊಲೆಗೈದ ಪ್ರಕರಣದಲ್ಲಿ ಸಂಚು ಹೂಡಿದ ಪತ್ನಿಯ ಬಂಧನ


 ಆಟೋ ಚಾಲಕನನ್ನು ಗುಂಡಿಟ್ಟು ಕೊಲೆಗೈದ ಪ್ರಕರಣದಲ್ಲಿ ಸಂಚು ಹೂಡಿದ ಪತ್ನಿಯನ್ನು ಬಂಧಿಸಲಾಗಿದೆ. ಪೆರಿಯಾರಂ, ಕೈದಪ್ರಂ ನಿವಾಸಿ ಕೆ.ಕೆ.ರಾಧಾಕೃಷ್ಣನ್ ರನ್ನು ಕೊಲೆಗೈದ ಪ್ರಕರಣದಲ್ಲಿ ಅವರ ಪತ್ನಿ ಮಿನಿ ನಂಬ್ಯಾರ್ (42) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಿನಿ ಈ ಕೊಲೆ ಪ್ರಕರಣದ ಮೂರನೇ ಆರೋಪಿಯಾಗಿದ್ದಾಳೆ. ಒಂದನೇ ಆರೋಪಿ ಸಂತೋಷ್, ಕೊಲೆ ನಡೆಸಲು ಕೋವಿ ನೀಡಿದ ಎರಡನೇ ಆರೋಪಿ ಜೋಸೆಫ್ ಎಂಬುವರನ್ನು ಈ ಹಿಂದೆಯೇ ಬಂಧಿಸಲಾಗಿತ್ತು.

   ಮಾರ್ಚ್ 20 ರಂದು ರಾತ್ರಿ 7 ಗಂಟೆಯ ವೇಳೆ ರಾಧಾಕೃಷ್ಣನ್ ಅವರ ಕೊಲೆ ನಡೆದಿತ್ತು. ರಾಧಾಕೃಷ್ಣನ್ ಅವರು ನೂತನವಾಗಿ ನಿರ್ಮಿಸುವ ಮನೆಯ ಹತ್ತಿರ ನಿಂತಿದ್ದಾಗ ಆರೋಪಿ ಸಂತೋಷ್ ಕೋವಿಯಿಂದ ಗುಂಡಿಟ್ಟು ಕೊಲೆಗೈದಿದ್ದನು. ಸಂತೋಷ್ ನನ್ನು ಮರುದಿನವೇ ಪೊಲೀಸರು ಬಂಧಿಸಿದ್ದರು. ಆರೋಪಿ ಸಂತೋಷ್ ಹಾಗೂ ಮಿನಿ ಒಂದೇ ತರಗತಿಯಲ್ಲಿ ಓದಿದವರು. ಇತ್ತೀಚೆಗೆ ನಡೆದ ಹಳೆ ವಿದ್ಯಾರ್ಥಿಗಳ ಸಂಗಮದಲ್ಲಿ ಹಲವು ವರ್ಷಗಳ ನಂತರ ಇಬ್ಬರೂ ಬೇಟಿಯಾಗಿದ್ದು ಅದು ಹೊಸ ಪ್ರೇಮಕಥೆಗೆ ನಾಂದಿಯಾಯಿತು. ಈ ಮಾಹಿತಿ ತಿಳಿದ ಪತಿ ರಾಧಾಕೃಷ್ಣನ್  ಪೆರಿಯಾರಂ ಪೊಲೀಸರಿಗೆ ದೂರು ನೀಡಿದ್ದನು. ಈ ಕೋಲದಿಂದ ಆರೋಪಿ ಸಂತೋಷ್, ಮಿನಿಯ ಜತೆ ಸಂಚು ಹೂಡಿ ರಾಧಾಕೃಷ್ಣನ್ ರನ್ನು ಗುಂಡಿಟ್ಟು ಕೊಂದನೆಂದು ಪೊಲೀಸರು ತಿಳಿಸಿದ್ದಾರೆ

Post a Comment

0 Comments