Ticker

6/recent/ticker-posts

ಪೆರ್ಲ ಚೆಕ್ ಪೋಸ್ಟ್ ಬಳಿಯಿಂದ ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ವಶಪಡಿಸಿದ ಪ್ರಕರಣ, ಇಬ್ಬರು ಆರೋಪಿಗಳ ಸೆರೆ


 ಬದಿಯಡ್ಕ: ಅಂತರ್ ರಾಜ್ಯ ಮಾದಕವಸ್ತು ಸಾಗಾಟದ ತಂಡದ ಇಬ್ಬರು ಸದಸ್ಯರನ್ನು ಬಂಧಿಸಲಾಗಿದೆ. ಕೋಜಿಕ್ಕೋಡ್ ಚಾಲಪುರಂ ನಿವಾಸಿ ರಂಜಿತ್ (30),  ಮಡಿಕೇರಿ ‌ನಿವಾಸಿ ಸವಾದ್(25) ಬಂಧಿತ ಆರೋಪಿಗಳು. ಕಾಸರಗೋಡು ಡಿ.ವೈ.ಎಸ್.ಪಿ.ಸುನಿಲ್ ಕುಮಾರ್ ಅವರ ಆದೇಶದಂತೆ  ಬದಿಯಡ್ಕ ಇನ್ಸ್ಪೆಕ್ಟರ್ ‌ಸುಧೀರ್‌ ನೇತೃತ್ವದ ಪೊಲೀಸರು ಆರೋಪಿಗಳನ್ನು ಬಂಧಿಸಿದರು. ರಂಜಿತ್‌ ಪಾಲಕ್ಕಾಡಿನಿಂದಲೂ  ಸವಾದ್ ಬೆಂಗಳೂರಿನಿಂದಲೂ ಸೆರೆಯಾಗಿದ್ದಾರೆ. 2025 ಜನವರಿ 4 ರಂದು ಪೆರ್ಲ ಚೆಕ್ ಪೋಸ್ಟ್ ಬಳಿ ಕಾರಿನಲ್ಲಿ ಸಾಗಿಸುತ್ತಿದ್ದ 83.890 ಗ್ರಾಂ ಎಂಡಿಎಂಎ ವಶಪಡಿಸಿದ ಪ್ರಕರಣದಲ್ಲಿ ಆರೋಪಿಗಳ ಬಂಧನ ನಡೆದಿದೆ. ಬೆಂಗಳೂರು ಮಾದಕವಸ್ತು ಉದ್ಪಾದನಾ ಕೇಂದ್ರದಿಂದ ಏಜಂಟರುಗಳ‌‌ ಮೂಲಕ ಕಾಸರಗೋಡು, ಕಣ್ಣೂರು ಜಿಲ್ಲೆಗಳ ವಿವಿದ ಭಾಗಗಳಿಗೆ ಮಾದಕವಸ್ತು ಪೂರೈಸುವ ಮುಖ್ಯ ವ್ಯಕ್ತಿ ಬಂಧಿತ ರಂಜಿತ್ ಆಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

Post a Comment

0 Comments