Ticker

6/recent/ticker-posts

ಕಾಸರಗೋಡು ನಗರದ ಏಕ ಕಂಬ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ಆರಂಭ


 ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಅಂಗವಾಗಿ ಕಾಸರಗೋಡು ನಗರದಲ್ಲಿ ‌ನಿರ್ಮಿಸಿದ ಏಕ ಕಂಬ ಮೇಲ್ಸೇತುವೆ  ಇಂದು ತೆರೆಯಲಾಗಿದೆ. ಕರಂದಕ್ಕಾಡಿನಿಂದ ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಕ್ಷೇತ್ರದ ವರೆಗೆ 1.12 ಕಿ.ಮೀಟರ್ ಉದ್ದವಿರುವ ದಕ್ಷಿಣ ಭಾರತದ ಅತ್ಯಂತ ದೊಡ್ಡ ಏಕ ಕಂಬ ಮೇಲ್ಸೇತುವೆ ಇದಾಗಿದೆ. ಇದೀಗ ಕರಂದಕ್ಕಾಡಿನಿಂದ ಸೇತುವೆ ಮೂಲಕ ವಾಹನಗಳನ್ನು ಬಿಡಲಾಗುತ್ತಿದೆ.  ಒಂದೆರಡು ದಿನಗಳಲ್ಲಿ ನುಳ್ಳಿಪ್ಪಾಡಿಯಿಂದಲೂ ವಾಹನ ಬಿಡಲಾಗುವುದು. 27 ಮೀಟರ್ ಅಗಲವಿರುವ ಈ ಚತುಷ್ಪದ ಹೆದ್ದಾರಿ 5.5 ಮೀಟರ್ ಎತ್ತರದಲ್ಲಿದೆ.

Post a Comment

0 Comments