ಮೀಯಪದವು: ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಮೀಯಪದವು ಹಾಗೂ ಶ್ರೀವಾಣಿ ವಿಲಾಸ ಶಾಲೆ ತೊಟ್ಟೆತ್ತೋಡಿ ಇದರ ಸಂಚಾಲಕರೂ, ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ಹಾಗೂ ಬುಡ್ರಿಯ ಮಲರಾಯ ಬಂಟ ಕ್ಷೇತ್ರದ ಅಧ್ಯಕ್ಷರೂ ಆಗಿದ್ದ ಪ್ರೇಮಾ. ಕೆ. ಭಟ್. ತೊಟ್ಟೆತ್ತೋಡಿ ಇವರ ನಿಧನಕ್ಕೆ ಸಂತಾಪ ಸೂಚಕ ಸಭೆಯು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಡಾ. ಚಂದ್ರಶೇಖರ ಚೌಟ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರ ಅಗಲುವಿಕೆಯು ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದರು. ಮೀಂಜ ಗ್ರಾಮ ಪಂಚಾಯತು ಅಧ್ಯಕ್ಷರಾದ ಸುಂದರಿ. ಆರ್. ಶೆಟ್ಟಿ, ಮೀಂಜ ಗ್ರಾಮ ಪಂಚಾಯತು ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸರಸ್ವತಿ, ವಾರ್ಡು ಸದಸ್ಯರಾದ ರುಕಿಯಾ ಸಿದ್ದಿಕ್, ಮಿಸಿರಿಯ, ನಿವೃತ್ತ ಮುಖ್ಯೋಪಾಧ್ಯಾಯರಾದ ಕೆ. ಟಿ. ಭಟ್, ನಿವೃತ್ತ ಅಧ್ಯಾಪಕರಾದ ರಾಜಾರಾಮ್ ರಾವ್, ಶ್ರೀ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕರಾದ ಶ್ರೀಧರ ರಾವ್, ಶರತ್ ಕೇಶವ ತೊಟ್ಟೆತ್ತೋಡಿ, ಶ್ರೀ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಅರವಿಂದಾಕ್ಷ ಭಂಡಾರಿ, ತೊಟ್ಟೆತ್ತೋಡಿ ಶ್ರೀ ವಾಣಿವಿಲಾಸ ಶಾಲೆಯ ಮುಖ್ಯೋಪಾಧ್ಯಾಯರಾದ ರಾಜೇಶ್ವರಿ ರಾವ್ ಮುಂತಾದವರು ಭಾಗವಹಿಸಿ ಪ್ರೇಮಾ. ಕೆ. ಭಟ್ ಅವರ ಸಾಧನೆಗಳನ್ನು ಸ್ಮರಿಸಿ ನುಡಿನಮನ ಸಲ್ಲಿಸಿದರು. ಅಧ್ಯಾಪಕರಾದ ಕಿರಣ್ ಪ್ರಾಸ್ತಾವಿಕ ಮಾತುಗಳನ್ನಾಡಿ ಮುಖ್ಯೋಪಾಧ್ಯಾಯರಾದ ಮೃದುಲ. ಕೆ. ಎಂ ವಂದಿಸಿದರು. ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದು ಪ್ರೇಮಾ. ಕೆ. ಭಟ್ ಅವರ ಭಾವಚಿತ್ರಕ್ಕೆ ಗೌರವದ ಪುಷ್ಪ ನಮಗಳನ್ನು ಸಲ್ಲಿಸಿದರು.
0 Comments